ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ,ಹಳೆಯಂಗಡಿ, ಮುಲ್ಕಿ ತಾಲೂಕು ಇದರ ಮುಂದಿನ ಐದು ವಷ೯ಗಳ ಅವಧಿಗೆ ಸಾಲಗಾರರಲ್ಲದ ಕ್ಷೇತ್ರದಿಂದ , ಆಡಳಿತ ಮಂಡಳಿಗೆ ನಿದೇ೯ಶಕರಾಗಿ ಅವಿರೋಧವಾಗಿ ಶ್ರೀ ಧನಂಜಯ ಕದ್ರಿ ತೋಟ ಆಯ್ಕೆಯಾಗಿದ್ದಾರೆ.

ಇವರು ದಿವಂಗತ ಕಾಂತಪ್ಪ ಕುಲಾಲ್ ಮತ್ತು ಶ್ರೀಮತಿ ರಾಧ ಇವರ ಸುಪುತ್ರರಾಗಿರುತ್ತಾರೆ.ರಾಜ್ಯ ಪ್ರಶಸ್ತಿ ವಿಜೇತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ(ರಿ)ಹಳೆಯಂಗಡಿ, ಇದರ ಅಜೀವ ಸದಸ್ಯರಾಗಿ, ಮಾಜಿ ಕೋಶಾಧಿಕಾರಿಯಾಗಿ,ಪ್ರಸುತ್ತ ಉಪಾಧ್ಯಕ್ಷರಾಗಿ ಕಾಯ೯ನಿವ೯ವಹಿಸುತ್ತಿದ್ದಾರೆ. ಅಲ್ಲದೇ ಸಾವ೯ಜನಿಕ ಗಣೇಶೋತ್ಸವ ಸೇವಾ ಸಮಿತಿ ,ಹಿಂದೂ ರುದ್ರ ಭೂಮಿ ನಿವ೯ಹಣಾ ಸಮಿತಿ,ಹಳೆಯಂಗಡಿ ಇದರ ಸಕ್ರೀಯ ಕಾಯ೯ಕತ೯ರಾಗಿ, ಹಾಗೂ ಸಮಾಜಿಕ, ಸಾಂಸ್ಕೃತಿಕ ಕಾಯ೯ಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
