ಮಂಜೇಶ್ವರ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ಸಾರಥ್ಯದ ನಾಟಕ ತಂಡ ಮಂಜೇಶ್ವರ ಶಾರದಾ ಆರ್ಟ್ಸ್ ಕಲಾವಿದರು ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮದ ಸಂದರ್ಭದಲ್ಲಿ ನೀಡಲಾಗುವ `ಶಾರದಾ ಕಲಾ ಪೋಷಕ ಪ್ರಶಸ್ತಿ’ಗೆ ತುಳುವೆರೆ ಚಾವಡಿ ಬೆಂಗಳೂರು ಇದರ ಗೌರವಾಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಬೆಳ್ಳಿಹಬ್ಬವು ಜನವರಿ 17, 18, 19ರಂದು ಉದ್ಯಾವರ ಮಾಡದ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ವಠಾರದಲ್ಲಿ ಜರಗಲಿದ್ದು, ಕೊನೆಯ ದಿನವಾದ ಜ. 19ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಉದ್ಯಮಿಗಳೂ ಸಮಾಜಸೇವಕರೂ ಆಗಿರುವ ಪುರುಷೋತ್ತಮ್ ಚೇಂಡ್ಲಾ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
