
ಕಾರ್ಕಳ (ಕುಲಾಲ ವರ್ಲ್ಡ್ ಡಾಟ್ ಕಾಮ್) : ಲೆಕ್ಕ ಪರಿಶೋಧಕರ ಸಂಸ್ಥೆ ಐಸಿಎಐ ನಡೆಸಿದ ಈ ಸಾಲಿನ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಡಾ. ಎನ್. ಎಸ್. ಎ. ಎಂ. ಪ್ರಥಮ ದರ್ಜೆ ಕಾಲೇಜಿನ ಬಿ. ಕಾಂ. ಪ್ರೊಫೇಶನಲ್ನ ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರಣೀತ ಮೂಲ್ಯ ತೇರ್ಗಡೆಯಾಗಿದ್ದಾರೆ. ಇವರು ಪ್ರಭಾಕರ ಮೂಲ್ಯ ಮತ್ತು ಶಾರದಾ ಮೂಲ್ಯ ಅವರ ಪುತ್ರಿಯಾಗಿದ್ದು, ಡಾ. ಎನ್. ಎಸ್. ಎ. ಎಂ. ಪ್ರಥಮ ದರ್ಜೆ ಕಾಲೇಜಿನ ತರಬೇತಿ ವಿಭಾಗದಿಂದ ತರಬೇತಿ ಪಡೆದಿರುತ್ತಾರೆ.ಸಾಧಕ ವಿದ್ಯಾರ್ಥಿನಿಗೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ, ನಿಟ್ಟೆ ಪರಿಗಣಿತ ವಿಶ್ವ ವಿದ್ಯಾಲಯದ ಪ್ರೊ-ಚಾನ್ಸೆಲರ್ ವಿಶಾಲ್ ಹೆಗ್ಡೆ, ಡಾ. ಶಾಂತರಾಮ ಶೆಟ್ಟಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಎಂ. ಎಸ್. ಮೂಡಿತ್ತಾಯ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ವೀಣಾ ಕುಮಾರಿ ಬಿ.ಕೆ., ಬೋಧಕ ಮತ್ತು ಬೋಧಕೆತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

