
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಮೀರಾರೋಡ್ ಪೂರ್ವದ ಸರ್ದಾರ್ ವಲ್ಲಭಭಾಯಿ ಪಟೇಲ್ ವಿದ್ಯಾಲಯ ಶಾಲೆಯ ವಿದ್ಯಾರ್ಥಿನಿ ಬಿಂದಿಯಾ ಉದಯ ಮೂಲ್ಯ ಅವರು 94.80% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಮೀರಾರೋಡ್ ಪೂರ್ವದ ನಿವಾಸಿ ಮೂಲತಃ ಬಂಟ್ವಾಳ ತಾಲೂಕಿನ ಮಾಣಿಯ ಉದಯ ಮೂಲ್ಯ ಹಾಗೂ ಸುನೀತಾ ಉದಯ ಮೂಲ್ಯ ದಂಪತಿಗಳ ಸುಪುತ್ರಿ.

