
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಸಾಲಿನ ಮಹಾರಾಷ್ಟ್ರದ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಬೊರಿವಿಲಿ ಸೇಂಟ್ ಫ್ರಾನ್ಸಿಸ್ ದಸ್ಸಿಸಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಜೀವಿತ್ ಭಾಸ್ಕರ್ ಕುಲಾಲ್ ಅವರು ವಾಣಿಜ್ಯ ವಿಷಯದಲ್ಲಿ 88.5% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಮೂಲತಃ ಕಾರ್ಕಳ ಬೋರ್ಕಟ್ಟೆ ಮಾನಡ್ಕದವರಾದ , ಪ್ರಸ್ತುತ ಮೀರಾ ರೋಡ್ ಪೂರ್ವದ ಶೀತಲ್ ನಗರದಲ್ಲಿ ವಾಸವಿರುವ ಭಾಸ್ಕರ್ ಕುಲಾಲ್ ಮತ್ತು ಸುಜಾತ ಕುಲಾಲ್ ದಂಪತಿಯ ಸುಪುತ್ರ.

