
ಬೆಳಗಾವಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ವನಿತಾ ವಿದ್ಯಾಲಯ ಇಲ್ಲಿನ ವಿದ್ಯಾರ್ಥಿ ಬಸವರಾಜ್ ಜಗದೀಶ್ ಮಾಸ್ತಿಗೇರಿ ಅವರು 94.8% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಪ್ರಥಮಸ್ಥಾನ ಪಡೆದಿದ್ದಾರೆ. ಇವರು ಬೆಳಗಾವಿ ಹಳೆಗಾಂಧಿನಗರ ನಿವಾಸಿ ಜಗದೀಶ್ ಮತ್ತು ಜ್ಯೋತಿ ದಂಪತಿಯ ಸುಪುತ್ರ.

