
ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಶಂಕರನಾರಾಯಣ ಮದರ್ ತೆರೆಸಾ ಪಿ ಯು ಕಾಲೇಜು ಇಲ್ಲಿಯ ವಿದ್ಯಾರ್ಥಿನಿ ಕೀರ್ತಿ ಅವರು ವಿಜ್ಞಾನ ವಿಭಾಗದಲ್ಲಿ 96.5% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೊಳಹಳ್ಳಿ ಏರ್ಜಿಕೊಡ್ಲು ಚಂದ್ರ ಕುಲಾಲ್ ಮತ್ತು ಲಲಿತಾ. ಸಿ. ದಂಪತಿಯ ಸುಪುತ್ರಿ .

