
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾಗಿರಿ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಅನ್ವಿತಾ ಎ.ಎಂ ಅವರು 96% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಿ.ಸಿ ರೋಡು ಜೋಡುಮಾರ್ಗ ಅಜ್ಜಿಬೆಟ್ಟು ಶಾಲೆ ಬಳಿಯ ನಿವಾಸಿ ಅಂತಪ್ಪ ಮೂಲ್ಯ ಮತ್ತು ರೇಣುಕಾ ದಂಪತಿಯ ಸುಪುತ್ರಿ .

