
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಡೇ ಶಿವಾಲಯ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಮನ್ಮಿತಾ ಅವರು 98.24% (614) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಡೇ ಶಿವಾಲಯ ಪುಣ್ಕೆದಡಿ ನಿವಾಸಿ ವಸಂತ ಕುಲಾಲ್ ಮತ್ತು ಚಿತ್ರಾವತಿ ದಂಪತಿಯ ಸುಪುತ್ರಿ.
