
ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಸುರತ್ಕಲ್ ಗೋವಿಂದ ದಾಸ ಪದವಿಪೂರ್ವ ಕಾಲೇಜು, ಇಲ್ಲಿನ ವಿದ್ಯಾರ್ಥಿ ಶ್ರವಣ್ ಅವರು ವಿಜ್ಞಾನ ವಿಭಾಗದಲ್ಲಿ 95.5% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಜೋಕಟ್ಟೆ ನಿವಾಸಿ ವಿಶ್ವನಾಥ ಕುಲಾಲ್ ಕುಲಾಲ್ ಮತ್ತು ಶೋಭಾ ದಂಪತಿಯ ಸುಪುತ್ರ.