
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಶಕ್ತಿನಗರ ಶಕ್ತಿ ಪದವಿಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿ ಪ್ರಾಣೇಶ ವಿನಯ್ ಕುಮಾರ್ ಅವರು ವಿಜ್ಞಾನ ವಿಭಾಗದಲ್ಲಿ 95.5% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ವಾಮಂಜೂರು ತಿರುವೈಲು ನಿವಾಸಿ ವಿನಯ್ ಕುಮಾರ್ ಹಾಗೂವನಿತಾ ದಂಪತಿಯ ಸುಪುತ್ರ.

