
ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಸುರತ್ಕಲ್ ಗೋವಿಂದದಾಸ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಧಿ. ಯು. ಕುಲಾಲ್ ಅವರು ವಿಜ್ಞಾನ (ಪಿಸಿಎಂಸಿ) ವಿಭಾಗದಲ್ಲಿ 96.33% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ತೋಕೂರಿನ ನಿವಾಸಿ ಉದಯ ಕುಮಾರ್ ಮತ್ತು ಗೀತಾ ದಂಪತಿಯ ಸುಪುತ್ರಿ.

