
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಅನುಜ್ ಎನ್ ಸಂಜನ್ 92.96% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೆನ್ನಬೆಟ್ಟು ಮುಂಚಿಕಾಡು ನಿವಾಸಿ ನಾರಾಯಣ ಸಂಜನ್ ಹಾಗೂ ಯಶೋದಾ ದಂಪತಿಯ ಸುಪುತ್ರ.

