
ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ತಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವೇದಾವತಿ ಎಸ್. ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಡಾ.ಯು ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸದ್ದಪಡಿಸಿ ಮಂಡಿಸಿದ ”ನವ್ಯೋತ್ತರ ಕನ್ನಡ ಮಹಿಳಾ ಕಾವ್ಯದಲ್ಲಿ ಹೆಣ್ಣಿನ ಅಸ್ಮಿತೆಯ ಪ್ರತಿನಿಧಿತ್ವ” ಎಂಬ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಉಪ್ಪಳ ಬಳಿಯ ಐಲ ಗೇಟಿನ ಸಂಕಪ್ಪ ಕುಲಾಲ್-ವಸಂತಿ ದಂಪತಿಯ ಪುತ್ರಿಯಾದ ವೇದಾವತಿ ಎಸ್.ರವರು ಶ್ರೀ ಶಾರದ ಎಯುಪಿ ಶಾಲೆ ಐಲ, ಸರಕಾರಿ ಪ್ರೌಡ ಶಾಲೆ ಮಂಗಲ್ಪಾಡಿ, ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಮಂಜೇಶ್ವರ ಹಾಗೂ ಸರಕಾರಿ ಕಾಲೇಜು ಕಾಸರಗೋಡು ಇಲ್ಲಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಪತಿ ನಾರಾಯಣ ಮೂಲ್ಯ ಅವರು ಏರಿಕ್ಕಳ ಮಧೂರು ಸಹಕಾರಿ ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ.