ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಂದಾಪುರ ಕುಲಾಲ ಸುಧಾರಕ ಸಂಘದ 31ನೇ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುರಸ್ಕಾರವು ಡಿ. ೨೫ರಂದು ಹೊಂಬಾಡಿಯಲ್ಲಿರುವ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.
ಕರಾವಳಿ ಮಲೆನಾಡು ಭಾಗದಲ್ಲಿ ಯಾವುದೇ ಸಮುದಾಯ ಅಥವಾ ಜಾತಿ ಸಂಘಗಳ ಗಟ್ಟಿ ಬೆನ್ನೆಲುಬು ಯುವಕರು ಮತ್ತು ಮಹಿಳೆ ಯರು. 2009 ರ ಹೊತ್ತಿಗೆ ಕರಾವಳಿ ಭಾಗದಲ್ಲಿ ಆರಂಭವಾದ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಕರಾವಳಿ ಭಾಗದಲ್ಲಿ ಮಾತ್ರ ಅಲ್ಲಾ ಇಡೀ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಯುವಕರ ಮತ್ತು ಮಹಿಳಾ ಸಂಘಟನೆಗೆ ಎಲ್ಲಾ ಜಾತಿ ಸಮುದಾಯಗಳಿಗೆ ಪ್ರೇರಣೆ.
ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸ್ಥಾಪಿಸಿದ ಸರ್ವಜ್ಞ ವೃತ್ತ ರಾಜ್ಯದಲ್ಲೇ ಪ್ರಥಮ ಹಾಗೂ ಎಲ್ಲರಿಗೂ ಪ್ರೇರಣೆ. ಉಡುಪಿ ಜಿಲ್ಲೆಯ ಯುವಕರ ಸಮಾಜಮುಖೀ ಜಾತ್ಯತೀತ ಚಿಂತನೆ, ಶ್ರಮದಾನ, ಮನೆ ಕಟ್ಟಿಕೊಡೋದು, ಬಡವರಿಗೆ ಸಹಾಯ, ಅನಾರೋಗ್ಯ ಪೀಡಿತರಿಗೆ ಸಹಾಯ, ಶಿಕ್ಷಣಕ್ಕೆ ಸ್ಕಾಲರ್ ಶಿಪ್ ಹೀಗೆ ಹತ್ತು ಹಲವು ರೀತಿಯ ಸಾಧನೆಯಿಂದ ಬೇರೆ ಯುವ ವೇದಿಕೆಗಳು ಪ್ರೇರಣೆ ಪಡೆದು ಮತ್ತಷ್ಟು ಬಲಿಷ್ಠರಾಗಬೇಕು,
ಯುವ ಸಂಘಟನೆಗಳ ಸಹಕಾರದಿಂದ ಕುಂದಾಪುರ ಸಂಘದ ಸ್ವಂತ ನಿವೇಶನದಲ್ಲಿ ಮತ್ತೊಂದು ಬೃಹತ್ ಸಮುದಾಯ ಭವನ ಕಟ್ಟಲು ಚಾಲನೆ ನೀಡಬೇಕು ಎಂದು ಕುಂದಾಪುರ ಕುಲಾಲ್ ಸಂಘದ 31 ನೇ ವಾರ್ಷಿಕ ಸಮಾರಂಭದಲ್ಲಿ ಕುಂದಾಪುರ, ಬೈಂದೂರು, ಹೆಬ್ರಿ ತಾಲೂಕುಗಳ ಕುಲಾಲ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕುಲಲ್ ಕುಂಬಾರ ಸಮುದಾಯದ ಹಿರಿಯ ನಾಯಕರುಗಳಾದ ಕುಲಾಲ ರತ್ನ ಡಾ ಎಂ ವಿ ಕುಲಾಲ್, ಮಂಗಳೂರು ಮನಪಾ ವೈದ್ಯಾಧಿಕಾರಿ ಡಾ ಅಣ್ಣಯ್ಯ ಕುಲಾಲ್ ಉಳ್ತೂರು, ಪೆರ್ಡೂರಿನ ಶಾಂಭವಿ ಕುಲಾಲ್, ಕುಂದಾಪುರದ ಪ್ರತಿಮಾ ಕುಲಾಲ್, ಕಾರ್ಕಳದ ದಿವಾಕರ್ ಬಂಗೇರ, ಕುಂದಾಪುರದ ವಿಶ್ವನಾಥ್ ಕುಲಾಲ್, ಐತು ಕುಲಾಲ್ ಪೆರ್ಡೂರು, ಸತೀಶ್ ಕುಲಾಲ್ ನಡೂರು, ಶಂಕರ್ ಕುಲಾಲ್ ಜನ್ನಾಡಿ ಸಹಿತ ನೂರಾರು ಹಿರಿ ಕಿರಿಯ ನಾಯಕರು ಗಳು ಅಭಿಪ್ರಾಯಪಟ್ಟರು.