
ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2021-22ನೇ ಸಾಲಿನ ಕಣ್ಣೂರು ವಿಶ್ವ ವಿದ್ಯಾಲಯದ ಬಿಎಸ್ಸಿ ಪದವಿಯ ಕೆಮಿಸ್ಟ್ರಿ ವಿಭಾಗದ ಪರೀಕ್ಷೆಯಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ವರ್ಷಿತಾ ಎನ್ ಇವರು 92% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಾಸರಗೋಡು ಬದಿಯಡ್ಕ ನಿವಾಸಿ ಶ್ರೀ ಮಹಾಲಿಂಗ ಎನ್ ಮತ್ತು ಶ್ರೀಮತಿ ಪುಷ್ಪಲತಾ ಪಿ ದಂಪತಿಗಳ ಸುಪುತ್ರಿ.

