ಕೊಪ್ಪಳ ಜಿಲ್ಲೆಯು ಹೈದ್ರಾಬಾದ್ – ಕರ್ನಾಟಕದ ಪ್ರದೇಶ ವ್ಯಾಪ್ತಿಗೆ ಸೇರಿರುವುದರಿಂದ 371 ಜೆ ಪ್ರಕಾರ ಗ್ರೂಪ್-ಸಿ ವೃಂದದ ನೇರ ನೇಮಕಾತಿಯಲ್ಲಿ ಶೇ. 80 ರಷ್ಟು ಮೀಸಲಾತಿಯೊಂದಿಗೆ ಅಬಕಾರಿ ಇಲಾಖೆಯಲ್ಲಿ 03 ವಾಹನ ಚಾಲಕರ ಹುದ್ದೆಗಳಿಗೆ ನೇರ ನೇಮಕಾತಿ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೇಮಕಾತಿಯನ್ನು ರೋಸ್ಟರ್ ಪದ್ಧತಿಯ ಪ್ರಕಾರ ಮಾಡಲಾಗುವುದು, ಷರತ್ತು ಮತ್ತು ನಿಬಂಧನೆಗಳು ಈ ಕೆಳಗಿನಂತೆ ಇರುತ್ತವೆ.
ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ 15-02-2016 ರೊಳಗಾಗಿ ಈ ಕೆಳಗೆ ನಮೂದಿಸಿರುವ ನಿಗದಿತ ಅರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.
ಚಾಲಕ : ಕನಿಷ್ಟ 7 ನೇ ತರಗತಿ ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಎರಡು ವರ್ಷ ಅವಧಿ ಪೂರ್ಣಗೊಂಡು ಚಾಲ್ತಿಯಲ್ಲಿರುವ ಲಘು ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.
ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅನುಗುಣವಾಗಿ.
ವರ್ಗ : ಸಾಮಾನ್ಯ – ಕನಿಷ್ಟ 18 ವರ್ಷ ದಿಂದ ಗರಿಷ್ಟ 35 ವರ್ಷ.
ಪ.ಪಂ – 18 ವರ್ಷದಿಂದ ಗರಿಷ್ಟ 40 ವರ್ಷ.
ದೇಹದಾಢ್ಯತೆ : ಅಭ್ಯರ್ಥಿಗಳು ಈ ಕೆಳಕಂಡ ದೇಹದಾರ್ಢ್ಯತೆ ಹೊಂದಿರಬೇಕು.
ಲಿಂಗ : ಪುರುಷರಿಗೆ – ಎತ್ತರ 163 ಸೆ.ಮೀ
ಮಹಿಳೆಯರಿಗೆ – ಎತ್ತರ 157 ಸೆ.ಮೀ ತೂಕ-49.09 ಕೆ.ಜಿ
ಎದೆಯ ಅಳತೆ : ಎದೆಯ ಸುತ್ತಳತೆ 81 ಸೆ.ಮೀ ಗಿಂತ ಕಡಿಮೆ ಇರಬಾರದು. ಪೂರ್ಣ ಉಸಿರು ಎಳೆದಾಗ 5 ಸೆ.ಮೀ ಹೆಚ್ಚಳವಾಗಬೇಕು.( ಇದು ಮಹಿಳಾ ಅಭ್ಯರ್ಥಿಗೆ ಅನ್ವಯಿಸುವುದಿಲ್ಲ.)
ಜಾತಿ : ಮೀಸಲಾತಿ ಕೋರ ಬಯಸುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಚಾಲ್ತಿಯಲ್ಲಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 15-12-2015
ಹೆಚ್ಚಿನ ಮಾಹಿತಿಗಾಗಿ http://koppal.nic.in/ ವೆಬ್ ಸೈಟ್ ಸಂಪರ್ಕಿಸಿರಿ