
ಕಾರ್ಕಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅನೀಶ್ ಕುಂಬಾರ್ ಅವರು ಮಹಾರಾಷ್ಟ್ರ ಸಿಇಟಿ ಪರೀಕ್ಷೆಯಲ್ಲಿ 99.53% ಪರ್ಸಂಟೈಲ್ ಅಂಕ ಗಳಿಸಿದ್ದಾರೆ. ಒಟ್ಟು 4ಲಕ್ಷದ 24 ಸಾವಿರ ವಿದ್ಯಾರ್ಥಿಗಳು ಬರೆದಿದ್ದ ಪರೀಕ್ಷೆಯಲ್ಲಿ ಅನೀಶ್ ಈ ಸಾಧನೆ ಮಾಡಿದ್ದಾರೆ. ಇವರಿಗೆ ಸುರತ್ಕಲ್ ಎನ್ ಐ ಟಿಕೆಯಲ್ಲಿ ಮೊದಲ ಹಂತದ ಇಂಜಿನಿಯರಿಂಗ್ ಕೌನ್ಸಿಲ್ ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಪ್ರವೇಶ ದೊರೆತಿರುತ್ತದೆ. ಅನೀಶ್ ಈ ಹಿಂದೆ ನಡೆದ ರಾಷ್ಟಮಟ್ಟದ ಜೆಇಇ ಪರೀಕ್ಷೆಯಲ್ಲಿ 99.53% ಹಾಗೂ ಕರ್ನಾಟಕ ಸಿಇಟಿಯಲ್ಲಿ 156 ನೇ ಸ್ಥಾನ ಪಡೆದಿದ್ದರು. ಇವರು ಜೋಗೇಶ್ವರಿ ಪೂರ್ವದ ಸಾಯಿ ಸಿದ್ಧಿ ಕಾಂಪ್ಲೆಕ್ಸ್ ಅಂಗಾರಿಕಾ ಸೊಸೈಟಿ ಯ ದೇವೇಂದ್ರ ಎಂ ಕುಂಬಾರ್ ಮತ್ತು ರೇವತಿ ಕುಂಬಾರ್ ದಂಪತಿಯ ಸುಪುತ್ರ.

