
ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ಸಿಬಿಎಸ್ಇ 10ನೇ ತರಗತಿಯ ಪರೀಕ್ಷೆಯಲ್ಲಿ ಸೌಂದರ್ಯ ನಗರದ ಸೌಂದರ್ಯ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿನಿ ಪ್ರಗತಿ ಕೆ ಅವರು 93.8% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರಿನ ಸೌಂದರ್ಯ ನಗರದ ಎಸ್. ಕೇಶವ ಮತ್ತು ಪ್ರತಿಭಾ ದಂಪತಿಯ ಸುಪುತ್ರಿ.