ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘ ಸುರತ್ಕಲ್ ಇದರ 2021-2026 ರ ಸಾಲಿಗೆ ಅಧ್ಯಕ್ಷರಾಗಿ ನಾಗೇಶ್ ಕುಲಾಲ್ ಕುಳಾಯಿ, ಉಪಾಧ್ಯಕ್ಷರಾಗಿ ಮಾಧವ ಬಂಗೇರ ಕೃಷ್ಣಾಪುರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ನಿರ್ದೇಶಕರಾಗಿ ಮುದ್ದು ಎಸ್ ಮೂಲ್ಯ, ಭೋಜ ಬಂಗೇರ ಮುಂಚೂರು , ಬಾಬು ಚಂದ್ರ ತಡಂಬೈಲ್, ಮೋಹನ್ ಐ ಮೂಲ್ಯ ಜೋಕಟ್ಟೆ, ಗಂಗಾಧರ್ ಬಂಜನ್ ಕುಳಾಯಿ, ರತ್ನವತಿ ಎಂ ಆರ್, ಉಷಾ ಆರ್ ಬಂಗೇರ, ಲೀಲಾ ಬಂಜನ್ ಆಯ್ಕೆ ಆಗಿದ್ದಾರೆ. ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಬಿ. ಪ್ರತಿಮಾರವರು ಚುನಾವಣೆಯನ್ನು ನಡೆಸಿಕೊಟ್ಟರು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮೂಲ್ಯ ಚುನಾವಣೆಗೆ ಸಹಕರಿಸಿದರು.

