ಕೊಲ್ಲೂರು ನಿತ್ಯಾನಂದ ಆಶ್ರಮದ ಪೂಜ್ಯ ಶ್ರೀ ವಿಮಲಾನಂದ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಕುಂಬಾರ ಸಮೂದಾಯದವರಾಗಿದ್ದರು. ತಮ್ಮ 15 ಹರೆಯದಲ್ಲಿ ಮುಂಬೈನ ಥಾಣಾ ಜಿಲ್ಲೆಯ ಗಣೇಶಪುರಿ ಎಂಬಲ್ಲಿ ಜಗದ್ಗುರು ನಿತ್ಯಾನಂದ ಗುರುಗಳ ಸಾಮೀಪ್ಯದಿಂದಾಗಿ ಸನ್ಯಾಸತ್ವಕ್ಕೆ ವಾಲಿಕೊಂಡು ದೀಕ್ಷೆ ಪಡೆದರು.
ವಿಮಲಾನಂದರು 1960ರಲ್ಲಿ ನಿತ್ಯಾನಂದ ಗುರುಗಳ ಸೂಚನೆಯಂತೆ ಕೊಲ್ಲೂರಿಗೆ ಆಗಮಿಸಿದ್ದರು. 1961ರಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಸಮೀಪದಲ್ಲಿ ನಿತ್ಯಾನಂದ ಆಶ್ರಮ ಸ್ಥಾಪಿಸಿದ್ದರು. 2009ರಲ್ಲಿ ಮಠದಲ್ಲಿ ನಿತ್ಯಾನಂದ ಗುರುದೇವರ ಪಂಚಲೋಹದ ವಿಗ್ರಹ ಪ್ರತಿಷ್ಠಾಪಿಸಿದ್ದರು. ಅಲ್ಲದೆ ಅಪಾರ ಸಂಖ್ಯೆಯ ಶಿಷ್ಯ ವೃಂದವನ್ನು ಹೊಂದಿದ್ದಾರೆ. ನಿತ್ಯಾನಂದ ಗುರುದೇವರ ಶಿಷ್ಯವಂದದ ಕೊನೆಯ ಕೊಂಡಿಯಾಗಿರುವ ವಿಮಲಾನಂದ ಸ್ವಾಮೀಜಿಯವರು ತಮ್ಮ ೮೦ನೆ ವಯಸ್ಸಿನಲ್ಲಿ (೨೦೧೪ ಜೂನ್ ೨, ಸೋಮವಾರ) ನಿಧನ ಹೊಂದಿದರು. ಇವರ ಸಮಾಧಿ ಕುರಿತಂತೆ ಆಶ್ರಮದ ಭಕ್ತರು ಮತ್ತು ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಮಧ್ಯೆ ವಿವಾದ ಉಂಟಾಗಿದ್ದು, ಬಳಿಕ ಮಾತುಕತೆ ಮೂಲಕ ಬಗೆಹರಿದಿತ್ತು.