ಕ್ರೀಡೆ ಮಾನವನ ಹವ್ಯಾಸಗಳಲ್ಲೊಂದು. ಕ್ರೀಡೆಯಿಂದಾಗಿ ಮಾನವನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯ. ಕೆಲವರು ಕ್ರೀಡೆಯನ್ನು ವೀಕ್ಷಿಸುವುದರಿಂದ ಸಂತೋಷವನ್ನು ಪಡೆಯುತ್ತಿದ್ದರೆ ಕೆಲವರ ಜೀವನಕ್ಕೆ ಅದು ಅರ್ಥ ನೀಡುತ್ತದೆ. ಎಳೆಯ ಪ್ರಾಯದಿಂದಲೇ ಕ್ರೀಡಾಭ್ಯಾಸ ಮಾಡುವುದರಿಂದ ಮುಂದೆ ಅವರು ಕ್ರೀಡಾ ಕ್ಷೇತ್ರದಲ್ಲಿ ಯಸಸ್ಸನ್ನು ಗಳಿಸುದರಲ್ಲಿ ಸಂದೇಹವಿಲ್ಲ.
ಕ್ರಿಕೆಟ್, ಪುಟ್ಬಾಲ್, ಆಲಿಬಾಲ್, ಕಬ್ಬಡ್ಡಿ, ಮೊದಲಾದ ಗುಂಪುಗಳಲ್ಲಿ ಆಡುವ ಆಟಗಳಲ್ಲಿ ಆಟಗಾರನ ಸಾಮರ್ಥ್ಯವೆಂದಾಗ ಅದು ವೈಯಕ್ತಿಕ ಹೇಗೋ ಹಾಗೆ ತಂಡದೊಳಗೆ ಆತನ ಚಾತುರ್ಯವೂ ಹೌದು. ತಂಡದ ಎಲ್ಲರಲ್ಲಿ ವಿಶ್ವಾಸ ಮೂಡಿಸಬಲ್ಲ ಚಾತುರ್ಯ ಪ್ರತಿಯೊಬ್ಬ ಆಟಗಾರರು ಬೆಳೆಸಿಕೊಳ್ಳಬೇಕಾಗುತ್ತದೆ. ಇಂತಹ ಒಂದು ಅಪೂರ್ವ ಬಾಲ ಪ್ರತೆಭೆ ನವಿ ಮುಂಬಯಿಯ ವಾಶಿಯ ಅಶ್ವಿತಾ ಲಿಂಗಪ್ಪ ಮೂಲ್ಯ. ವಾಶಿಯ ಫಾದರ್ ಏಂಜಲ್ ಜೂನಿಯರ್ ಕಾಲೇಜಿನ ವಿಧ್ಯಾರ್ಥಿನಿ ಅಶ್ವಿತಾ, ಕ್ರೀಡಾ ಕ್ಷೇತ್ರದಲ್ಲಿ ಎಲ್ಲೆಡೆ ಮಿಂಚುತ್ತಿರುವ ಹೆಮ್ಮೆಯ ಕನ್ನಡತಿ.
ಬಾಲ್ಯದಲ್ಲಿಯೇ ಆಟೋಟಗಳಲ್ಲಿ ಅಪಾರ ಆಸಕ್ತಿ. ಪಾಲಕರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ರಾಷ್ಟ್ರಮಟ್ಟದಲ್ಲಿ ಹಾಂಡ್ ಬಾಲ್ ಮತ್ತು ಪುಟ್ಬಾಲ್ ಕ್ರೀಡಾ ಕ್ಷೇತ್ರದಲ್ಲಿ ಭಾಗವಹಿಸುತ್ತಾ ತನ್ನ ಪ್ರಯತ್ನದಿಂದ ಪ್ರಶಸ್ತಿಗಳನ್ನು ಗಳಿಸುತ್ತಾ ಬಂದಳು. ಶಾಲೆಯಲ್ಲಿ ನಡೆಯುವ ಪ್ರತೀ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಶಿಕ್ಷಕರ ಮತ್ತು ಇತರ ವಿಧ್ಯಾರ್ಧಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಆಟೋಟದೊಂದಿಗೆ ಶಿಕ್ಷಣದಲ್ಲೂ ಪ್ರತಿಭಾವಂತಳಾಗಿರುವ ಈಕೆ ವಿಧ್ಯಾಭ್ಯಾಸದಲ್ಲೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಳ್ಳುತ್ತಿದ್ದಳು. ಚಿತ್ರಕಲೆ, ನೃತ್ಯಕಲೆಯಲ್ಲೂ ಸಾಧನೆಗೈದ ಅಶ್ವಿತಾ ಲಿಂಗಪ್ಪ ಮೂಲ್ಯ ಮುಂಬಯಿ ಕುಲಾಲ ಸಮುದಾಯದ ಸಂಘಟನೆಗಳ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಈಕೆಯ ಸಾಧನೆಗಳು ಅನೇಕ ಅವುಗಳಲ್ಲಿ ಕೆಲವನ್ನು ಹೆಸರಿಸುವುದಾದರೆ, ನಾಸಿಕ್ ನಲ್ಲಿ ನಡೆದ ಮಹಾರಾಷ್ಟ್ರ ರಾಜ್ಯ 7ಏ ಸೈಡ್ ಪುಟ್ ಬಾಲ್ ಚಾಂಪಿಯನ್ ಶಿಪ್ “ಆರ್ಚಿಡ್ಪುಟ್ಪಾಲ್ ಕಪ್ 2008” ಇದರಲ್ಲಿ ಪ್ರಥಮ ಸ್ಥಾನ. ಲೋಕಸೇವಾ ಪ್ರತಿಸ್ಠಾನ, ಪುಣೆ ಇದರ ಆಶ್ರಯದಲ್ಲಿ ಜರಗಿದ ಮಹಾರಾಷ್ಟ್ರ ರಾಜ್ಯ 7ಏ ಸೈಡ್ ಪುಟ್ ಬಾಲ್ ಚಾಂಪಿಯನ್ಶಿಪ್ “ಲೋಕಸೇವಾ ಕಪ್ 2009” ಇದರಲ್ಲೂ ಪ್ರಥಮ ಸ್ಥಾನ ಮತ್ತು ಟ್ರೋಪಿ ಗಳಿಸಿದ್ದಾಳೆ.ಕ್ರೀಡಾ ಮತ್ತು ಯುವಕ ಸೇವಾ ಸಂಚಲನಾಲಯ, ಪೂಣೆ ಇದರ ಆಶ್ರಯದಲ್ಲಿ ನಡೆದ ಜಿಲ್ಲಾ ಕ್ರೀಡಾ ಪರಿಷತ್ತು ಮತ್ತು ಜಿಲ್ಲ್ಲ್ ಕ್ರೀಡಾ ಅಧಿಕಾರಿ ಕಾರ್ಯಾಲಯ ಇದರ ಜಂಟಿ ಆಯೋಜನೆಯಲ್ಲಿ 2011 ಅಕ್ಟೋಬರ ತಿಂಗಳಲ್ಲಿನಡೆದ “ರಾಜ್ಯ ಶಾಲಾ ಪುಟ್ಬಾಲ್ ಸ್ಪ್ರರ್ದೆ” ಯಲ್ಲಿ ಪ್ರಥಮ ಸ್ಥಾನ. ಮೇ. 2008 ರಲ್ಲಿ ಹಾಂಡ್ ಬಾಲ್ ಪೆಡರೇಶನ್ ಆಪ್ ಇಂಡಿಯಾ ಇದರ ಪಂಜಾಬ್ ಹಾಂಡ್ ಬಾಲ್ ಅಸೋಶಿಯೇಶನ್, ಪಂಜಾಬ್ ನ ನವಸೆಹರ್ ನಲ್ಲಿ ಜರಗಿದ 10 ನೆಯ “ಮಿನಿ ಹಾಂಡ್ ಬಾಲ್ ನ್ಯಾಷನಲ್ ಚಾಂಪಿಯನ್ಶಿಪ್ 2008” ರಲ್ಲಿ ಪ್ರಥಮ ಸ್ಥಾನದ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ಗಳಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆಯನ್ನು ಗಳಿಸಿದ ಕೀರ್ತಿ ಅಶ್ವಿತಾಳಿಗೆ ಸಲ್ಲ್ಲುತ್ತಿದೆ. 2008 ರಲ್ಲಿ ಕೋಲಾಪುರ ಶಿವಾಜಿಪೇಟೆಯಲ್ಲಿ ಜಿಲ್ಲಾ ಕ್ರೀಡಾ ಪರಿಷತ್ತು ಮತ್ತು ಜಿಲ್ಲಾ ಕ್ರೀಡಾ ಅಧಿಕಾರಿ ಕಾರ್ಯಾಲಾಯ ಕೋಲಾಪುರ ಇದರ ಮುಂದಾಳತ್ವದಲ್ಲಿ ಜರಗಿದ ರಾಜ್ಯ ಮಟ್ಟದ ಹಾಂಡ್ ಬಾಲ್ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ವಿಯನ್ನು ಸಾಧಿಸಿದ್ದಾಳೆ.
ನವೆಂಬರ 2011 ರಲ್ಲಿ ಜಿಲ್ಲಾ ಕ್ರೀಡಾ ಪರಿಷತ್ತು ಥಾಣೆ ಮತ್ತು ನವಿಮುಂಬಯಿ ಮಹಾನಗರಪಾಲಿಕೆಯ ಆಶ್ರಯದಲ್ಲಿ ಜರಗಿದ “ಮಹಾನಗರ ಪಾಲಿಕಾ ಕ್ಷೇತ್ರ ಜಿಲ್ಲಾಸ್ಥರ್ ಕ್ರೀಡಾ ಸ್ಪ್ರರ್ಧೆ”ಯಲ್ಲಿ ಹಾಂಡ್ ಬಾಲ್ ನಲ್ಲಿ ತೃತೀಯ ಸ್ಥಾನ. ಆಗಸ್ತ್ 2011 ರಲ್ಲಿ ಜಿಲ್ಲಾ ಕ್ರೀಡಾ ಪರಿಷತ್ತು ಥಾಣೆಮತ್ತು ನವಿಮುಂಬಯಿ ನಗರ ಪಾಲಿಕೆಯ ಆಶ್ರಯದಲ್ಲಿ “ಮಹಾನಗರ ಪಾಲಿಕಾ ಕ್ಷೇತ್ರ ಜಿಲ್ಲಾಸ್ತರ್ ಕ್ರೀಡಾಸ್ಪ್ರರ್ಧೆ”ಯ ಲಾಂಗ್ ಜಂಪ್ ನಲ್ಲಿ ಪ್ರಥಮ ಸ್ಥಾನ, ಪ್ರಮಾಣ ಪತ್ರ ಮತ್ತು ಪದಕ. ಇವಳ ಪ್ರತಿಭೆಯನ್ನು ಗುರುತಿಸಿ ಸೈಂಟ್ ಲಾರೆನ್ಸ್ ಹೈಸ್ಕೂಲ್ವಾಶಿಯ ವತಿಯಿಂದ “ಸ್ಟಾರ್ ಪರ್ ಪೊರ್ ಮೆನ್ಸ್ ಇನ್ ಸ್ಪ್ರೋರ್ಟ್ (ಪುಟ್ ಬಾಲ್) ಇನ್ ನ್ಯಾಷನಲ್ಲೆವೆಲ್” ಎಂಬ ವಿಶೇಷ ಬಿರುದು ಮತ್ತು ಪ್ರತಿಭಾ ಪ್ರಮಾಣ ಪತ್ರ ಕೊಟ್ಟು ಗೌರವಿಸಿದ್ದಾರೆ. ಫೆಬ್ರವರಿ 2011 ರಲ್ಲಿ ರಾಯನ್ ಇಂಟರ್ ಸ್ಕೂಲ್ ಅತ್ಲೆಟಿಕ್ಮೀಟ್ ನಲ್ಲಿ “ಡಿಸ್ಕೋಸ್ ತ್ರೋ” ನಲ್ಲಿ ಪ್ರಧಮ ಚಿನ್ನದ ಪದಕ, ಹೈಜಂಪ್ ನಲ್ಲಿ ಪ್ರಥಮಚಿನ್ನದ ಪದಕ ಮತ್ತು ರಿಲೇ ಯಲ್ಲಿ ಬೆಳ್ಳಿ ಪದಕ ಗಳಿಸಿರುತ್ತಾಳೆ. ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿತನ್ನ ಕ್ರೀಡಾ ಪ್ರತಿಭೆಯಿಂದ ಮಿಂಚಿದ ಅಶ್ವಿತಾ ಲಿಂಗಪ್ಪ ಮೂಲ್ಯ ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿಯಶಸ್ಸನ್ನು ಗಳಿಸಲಿ ಎಂದು ಹಾರೈಸೋಣ.