ಪುಣೆ (ಕುಲಾಲ ವರ್ಲ್ಡ್ ಡಾಟ್ ಕಾಮ್) : ಜಾತಿ, ಭಾಷೆ, ಧರ್ಮ ಯಾವುದೇ ಇದ್ದರು ಕೂಡಾ ಅದರದ್ದೇ ಆದಂತಹ ಸಂಸ್ಕೃತಿಯ ಜತೆಯಲ್ಲಿ ಕೂಡಿಕೊಂಡಿರುತ್ತದೆ. ನಮ್ಮ ಸಂಸ್ಕೃತಿ ದೇಶದಲ್ಲಿಯೆ ಶ್ರೀಮಂತಿಕೆಯನ್ನು ಪಡೆದಿದೆ. ಪಾರಂಪರಿಕ ಕುಲ ಪದ್ಧತಿಯೊಂದಿಗೆ ಸಂಸ್ಕೃತಿಯನ್ನು ಬೆಳೆಸಬೇಕು. ಒಂದು ಸಮಾಜಕ್ಕೆ ಅದರದ್ದೇ ಆದಂತಹ ಮೂಲವಾದ ಚರಿತ್ರೆಯಿದೆ. ಸಂಘಟನೆ ಎಂಬುವುದು ಒಗ್ಗಟ್ಟಿನ ವೇದಿಕೆ ನಿರ್ಮಿಸುತ್ತದೆ. ಇಂತಹ ವೇದಿಕೆ ನಿರ್ಮಾಣಕ್ಕೆ ಧಾರ್ಮಿಕತೆಯ ಸ್ಪರ್ಶ ಇದ್ದರೆ ಮತ್ತಷ್ಟು ಮೆರುಗು ಬರುತ್ತದೆ. ಸಂಘಟನೆಗಳಲ್ಲಿ ಭೇದ-ಭಾವ ಇರಬಾರದು. ಕೇವಲ ಒಗ್ಗಟ್ಟೆ ಸಮಾಜದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನಾಡಿನ ಸಂಸ್ಕೃತಿಯಲ್ಲಿ, ಅಚಾರ ವಿಚಾರಗಳಲ್ಲಿ ಬಹಳ ವಿಶಿಷ್ಟತೆಯಿದೆ. ದೇವಾರಾಧನೆ, ನಾಗರಾಧನೆ, ದೈವರಾಧನೆಗೆ ಎಲ್ಲಾ ಜಾತೀಯ ಬಾಂಧವರು ಮಹತ್ವವನ್ನು ಕೊಡುತ್ತಾರೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿಯ ಧಾರ್ಮಿಕತೆಯ ಸೆಳೆತ. ನಮ್ಮ ಕುಲಾಲ ಬಾಂಧವರು ಸಂಘಟನೆಯೊಂದಿಗೆ ಧಾರ್ಮಿಕತೆಯನ್ನು ಜೋಡಿಸಿ ಅ ಮೂಲಕ ಕಾರ್ಯಗೈದರೆ ಮತ್ತಷ್ಟು ಬಲಿಷ್ಠರಾಗಬಲ್ಲವು ಎಂದು ಮಂಗಳೂರು ಕುಲಶೇಖರದ ಶ್ರೀ ವೀರ ನಾರಾಯಣ ದೇವಸ್ಥಾನದ ಆಡಳಿತ ಟ್ರಸ್ಟಿ ಪುರುಷೋತ್ತಮ್ ಕುಲಾಲ್ ಕಲ್ಭಾವಿ ನುಡಿದರು.
ನ. 10ರಂದು ಕೇತ್ಕರ್ರೋಡ್ ಶ್ಯಾಮ್ ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್ನ ಸಭಾಭವನದಲ್ಲಿ ನಡೆದ ಪುಣೆ ಕುಲಾಲ ಸಂಘದ 41ನೇ ಮಹಾಸಭೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಕುಲಾಲ ಸಮಾಜದಲ್ಲಿ ಎಲ್ಲರು ವಿದ್ಯಾವಂತರೆ. ಪ್ರತಿ ಮನೆಯಲ್ಲೂ ಉನ್ನತ ವ್ಯಾಸಂಗ ಮಾಡಿ ಉತ್ತಮ ವಿದ್ಯಾವಂತರು ಇದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ನಾವು ಮತ್ತಷ್ಟು ಮುಂದೆ ಬಂದರೆ ಸಮಾಜಕ್ಕೆ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರು ಸ್ವಸಮಾಜದ ಸಂಘಟನೆಯೊಂದಿಗೆ ಬೆರೆತು ಸಮಾಜ ಸೇವೆಯಲ್ಲಿಯೂ ಕೈಜೋಡಿಸಬೇಕು. ಪುಣೆ ಕುಲಾಲ ಸಂಘವು ತನ್ನ 50 ವರ್ಷದ ಸಮಯದಲ್ಲಿ ತನ್ನದೇ ಅದಂತಹ ಸ್ವಂತ ಕಟ್ಟಡದಲ್ಲಿ ಭವನ ನಿರ್ಮಿಸಿ ಅದರಲ್ಲಿಯೇ ಸುವರ್ಣ ಮಹೋತ್ಸವ ಆಚರಿಸುವಂತಾಗಬೇಕು ಎಂದು ನುಡಿದರು.
ನಮ್ಮ ಕುಲಾಲ ಸಂಘದ ಇವರೆಗಿನ ಬೆಳವಣಿಗೆಯಲ್ಲಿ ಮಾಜಿ ಅಧ್ಯಕ್ಷರುಗಳ ಪರಿಶ್ರಮವಿದೆ. ಹಾಗೂ ಸಂಘದ ಕಾರ್ಯ ಯೋಜನೆಗಳಲ್ಲಿ ಸಮಾಜ ಸೇವಾ ಕಾರ್ಯಗಳಲ್ಲಿ ಪದಾಧಿಕಾರಿಗಳಂತೆ ತೆರೆಯ ಮರೆಯಲ್ಲಿ ಕಾರ್ಯಗೈಯುವ ಸದಸ್ಯ ಬಾಂಧವರ ಕೊಡುಗೆ ಶ್ಲಾಘನೀಯ. ನಮ್ಮ ಸಮಾಜದ ಬಾಂದವರು ತಮ್ಮ ಮನೆಯಲ್ಲಿ ಮಕ್ಕಳಿಗೆ ಸಂಸ್ಕೃತಿಯೊಂದಿಗೆ ನಮ್ಮ ಸಮಾಜದ ಮಹತ್ವವನ್ನು ತಿಳಿಸಬೇಕು. ಸಮಾಜದ ಬಾಂಧವರಿಗಾಗಿ ಇರುವ ಸಂಸ್ಥೆ ತಮ್ಮದೇ ಎಂಬ ಭಾವನೆ ನಮ್ಮಲ್ಲಿರಬೇಕು. ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ಧಾರ್ಮಿಕತೆಯೊಂದಿಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಧ್ಯೇಯ ಮಕ್ಕಳಿಗೆ ತಿಳಿಯಪಡಿಸಬೇಕು. ಸಂಘದ ಚುಕ್ಕಾಣಿ ಯಾರೇ ಹಿಡಿದರು ತಮ್ಮೆಲ್ಲರ ಸಹಕಾರ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಸಿಕ್ಕಿ ಸಂಘಕ್ಕೆ ಭದ್ರ ಬುನಾದಿಯನ್ನು ಹಾಕುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು. ಇವರೆಗಿನ ತಮ್ಮೆಲ್ಲರ ಸಹಕಾರಕ್ಕೆ ದನ್ಯವಾದಗಳು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಾಲ ಸಂಘ ಪುಣೆ ಇದರ ಅಧ್ಯಕ್ಷ ಹರೀಶ್ ಕುಲಾಲ್ ಮುಂಡ್ಕೂರು ನುಡಿದರು.
ಪುಣೆ ಕುಲಾಲ ಸಂಘದ ಅದ್ಯಕ್ಷರಾದ ಹರೀಶ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ, ಬಿಲ್ಲವ ಸಂಘ ಪುಣೆ ಇದರ ಮಾಜಿ ಅಧ್ಯಕ್ಷ ಶೇಖರ್ ಟಿ. ಪೂಜಾರಿ, ಮುಂಬಯಿ ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ್ ಕುಲಾಲ್, ಜ್ಯೋತಿ ಕೋ. ಆಪರೇಟಿವ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಯಾನ್, ಮುಂಬಯಿ ಕುಲಾಲ್ ಸಂಘದ ಉಪಾಧ್ಯಕ್ಷ ರಾಘು ಮೂಲ್ಯ, ಸಂಘದ ಉಪಾಧ್ಯಕ್ಷ ದೊಡ್ಡಣ್ಣ ಮೂಲ್ಯ, ಗೌರವ ಕಾರ್ಯದರ್ಶಿ ನವೀನ್ ಬಂಟ್ವಾಳ್, ಕೋಶಾಧಿಕಾರಿ ವಾಸು ಕುಲಾಲ್, ಹಿರಿಯ ಸಲಹೆಗಾರರಾದ ರಮೇಶ್ ಕೊಡ್ಮನ್ಕರ್, ಕುಟ್ಟಿ ಮೂಲ್ಯ, ಸದಾಶಿವ ಮೂಲ್ಯ, ಸುರೇಂದ್ರ ಮೂಲ್ಯ, ದಾಮೋದರ ಮೂಲ್ಯ, ಮನೋಜ್ ಸಾಲ್ಯಾನ್, ನಾಗೇಶ್ ಕುಲಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಶಾರದಾ ಮೂಲ್ಯ, ಉಪಾಧ್ಯಕ್ಷೆ ಯಶೋದಾ ಮೂಲ್ಯ, ಜಯಂತಿ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿ-ಗಣ್ಯರನ್ನು ಪುಣೆ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಸದಸ್ಯರು ಯಕ್ಷಗಾನ ಶೈಲಿಯಲ್ಲಿ ಸ್ವಾಗತಿಸಿದರು. ಅತಿಥಿ-ಗಣ್ಯರು ಹಾಗೂ ಸಂಘದ ಪದಾಧಿಕಾರಿಗಳು ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಪುರುಷೋತ್ತಮ ಕುಲಾಲ್ ಕಲ್ಭಾವಿ ಮತ್ತು ಶೇಖರ್ ಟಿ. ಪೂಜಾರಿ ಅವರನ್ನು ಸಂಘದ ಅಧ್ಯಕ್ಷರಾದ ಹಾರೀಶ್ ಕುಲಾಲ್ ಅವರು ಸಮ್ಮಾನಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಮತ್ತು ಪದಾಧಿಕಾರಿಗಳನ್ನು ಸಂಘದ ಸದಸ್ಯರು ಗೌರವಿಸಿದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗು ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಸರಸ್ವತಿ ಸಿ. ಕುಲಾಲ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.
ಮಹಿಳಾ ವಿಭಾಗದ ಅನಿತಾ ಕೊಡ್ಮನ್ಕರ್ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ವಾಸು ಕುಲಾಲ್ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದನೆ ಪಡೆದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮಾಜದ ಮಕ್ಕಳಿಂದ ನೃತ್ಯ ವೈವಿಧ್ಯ, ದೀರಜ್ ವರ್ಕಾಡಿ ಇವರಿಂದ ರಸ ಮಂಜರಿ, ಮನ್ವಿತ್ ಕುಲಾಲ್ ಇವರಿಂದ ಬಾಕ್ಸಿಂಗ್ ಹಾಗೂ ಫ್ರೆಂಡ್ಸ್ ಮಂಗಳೂರು, ಪ್ರವೀಣ್ ಕೊಡಕ್ಕಲ್ ಮತ್ತು ರಂಜನ್ ಬೋಳಾರ್ ಸಾರಥ್ಯದಲ್ಲಿ ತೆಲಿಕೆ ಬಾಯಿ ನಿಲಿಕೆ ಹಾಸ್ಯ ಕಾರ್ಯಕ್ರಮ ನಡೆಯಿತು. ಸಂಘದ ಪ್ರಮುಖರಾದ ಸುಂದರ ಮೂಲ್ಯ, ಅನಿಲ್ ಕುಲಾಲ್, ಕಾರ್ತಿಕ್ ಕುಲಾಲ್, ಭಾಗ್ಯಶ್ರೀ ಮೂಲ್ಯ, ರುತುಜಾ ಕುಲಾಲ್, ಸರಸ್ವತಿ ಕುಲಾಲ್, ಅನಿತಾ ಕೊಡ್ಮನ್ಕರ್ ಮತ್ತು ಸಂಘದ ಸದಸ್ಯರು, ಮಹಿಳಾ ಸದಸ್ಯರು ಸಹಕರಿಸಿದರು. ಸರಸ್ವತಿ ಸಿ. ಕುಲಾಲ್, ಅನಿತಾ ಕೊಡ್ಮನ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
–ಚಿತ್ರ-ವರದಿ: ಹರೀಶ್ ಮೂಡಬಿದ್ರೆ ಪುಣೆ