ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕುಂದಾಪುರ ತಾಲೂಕು ಕೆದೂರು ಗ್ರಾ. ಪಂ. ವ್ಯಾಪ್ತಿಯ ಶಾನಾಡಿ ನಿವಾಸಿ ತಿರುಮಲ ಕುಲಾಲ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೋಟ ವಿವೇಕ ಕಾಲೇಜಿನ ಪಿಯುಸಿ ವಿದ್ಯಾರ್ಥಿ ತಿರುಮಲ ಕುಲಾಲ್ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿಜೇತರಾಗಿ ಮಂಡ್ಯದಲ್ಲಿ ನಡೆಯುವ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಬ್ರಹ್ಮಾವರದ ನಿರ್ಮಲ ಶಿಕ್ಷಣ ಸಂಸ್ಥೆಯಲ್ಲಿ ನೆಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯದಲ್ಲಿ ತಿರುಮಲ ಕುಲಾಲ್ ಪ್ರತಿನಿಧಿಸಿದ ಕೋಟ ವಿವೇಕ ಕಾಲೇಜಿನ ತಂಡ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿತ್ತು. ಕೋಟದ ವಿವೇಕ ಕಾಲೇಜಿನಲ್ಲಿ ಜರುಗಿದ ಜಿಲ್ಲಾಮಟ್ಟದಲ್ಲೂ ಈ ತಂಡ ರನ್ನರ್ ಅಪ್ ಆಗಿ ಮೂಡಿಬಂದಿದ್ದು ಅತ್ಯುತ್ತಮ ನಿರ್ವಹಣೆ ನೀಡಿದ ತಿರುಮಲ ಕುಲಾಲ್ ಅಕ್ಟೋಬರ್ ನಲ್ಲಿ ಮಂಡ್ಯದಲ್ಲಿ ನಡೆಯುವ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ತಿರುಮಲ ಅವರು ಶಾನಾಡಿ ಅಣ್ಣಪ್ಪ ಕುಲಾಲ್ ಮತ್ತು ಬಾಬಿ ದಂಪತಿಗಳ ಪ್ರಥಮ ಪುತ್ರರಾಗಿದ್ದು, ಈಗಾಗಲೇ ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.


