ಉಪ್ಪಿನಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸಬಳೂರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆದ ರಾಮಕುಂಜ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಕಿರಿಯ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯ ೪ನೇ ತರಗತಿ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಮೂಲ್ಯ ಪ್ರಥಮ ಸ್ಥಾನ ಪಡೆದುಕೊಂಡು ಉಪ್ಪಿನಂಗಡಿಯಲ್ಲಿ ನಡೆಯಲಿರುವ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಹಿರಿಯರ ವಿಭಾಗದ ಇಂಗ್ಲೀಷ್ ಕಂಠಪಾಠದಲ್ಲಿ ೫ನೇ ತರಗತಿಯ ನಿಶಾಂತ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ರಾಮಕುಂಜ ಗ್ರಾಮದ ನಡ್ಜೀರು ನಿವಾಸಿ ನಾರಾಯಣ ಮೂಲ್ಯ ಹಾಗೂ ಹೇಮಲತಾ ದಂಪತಿ ಮಕ್ಕಳು. ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಗುರು ಪಿ.ಎಸ್. ನಾರಾಯಣ ಭಟ್, ಶಿಕ್ಷಕಿಯರಾದ ಚಿತ್ರಾವತಿ ಬಿ., ಗೀತಾರವರು ಮಾರ್ಗದರ್ಶನ ನೀಡಿದ್ದರು.
ಕನ್ನಡ ಕಂಠಪಾಠ ಸ್ಪರ್ಧೆ : ದೀಕ್ಷಾ ಮೂಲ್ಯ ತಾಲೂಕು ಮಟ್ಟಕ್ಕೆ ಆಯ್ಕೆ
Students corner
1 Min Read


