2016ರ ರಿಯೋ ಒಲಂಪಿಕ್ಸ್ ನಲ್ಲಿ ಭಾವಹಿಸಲು ಭಾರತದ ಮಹಿಳಾ ಹಾಕಿ ತಂಡ ಅರ್ಹತೆಯನ್ನು ಪಡೆದುಕೊಂಡಿದೆ. ಕುಂಬಾರ ಜನಾಂಗದಲ್ಲಿ ಬರುವ ಪ್ರಜಾಪತಿ ಸಮೂದಾಯದವರಾದ ರೀತೂ ರಾಣಿ ಈ ತಂಡದ ಹೆಮ್ಮೆಯ ನಾಯಕಿಯಾಗಿದ್ದಾರೆ. 36 ವರ್ಷದ ಹಿಂದೆ ಕೈತಪ್ಪಿದ್ದ ಅರ್ಹತೆ ಇದೀಗ ಮತ್ತೆ ಪಡೆಯಲು ಭಾರತಕ್ಕೆ ಅವಕಾಶ ಸಿಕ್ಕಿದೆ. ರೀತೂ ನಾಯಕತ್ವದಲ್ಲಿ ಇತ್ತೀಚೆಗೆ ನಡೆದ ಯುರೋ ಹಾಕಿ ಚಾಂಪಿಯನ್ ಶಿಪ್ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೇನ್ ಸೋಲನ್ನನುಭವಿಸಿತು. ಈ ಹಿನ್ನೆಲೆಯಲ್ಲಿ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಭಾಗ್ಯ ಭಾರತಕ್ಕೆ ದೊರಕಿದೆ. 1980ರ ಒಲಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಅರ್ಹತೆ ಪಡೆದಿತ್ತು. ಈ ಒಲಂಪಿಕ್ಸ್ ನಲ್ಲಿ ಭಾರತವು 4ನೇ ಸ್ಥಾನ ಪಡೆದುಕೊಂಡಿತ್ತು. ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಒಟ್ಟು 12 ತಂಡಗಳಿಗೆ ಅವಕಾಶವಿದ್ದು, ಈಗಾಗಲೇ ಕೊರಿಯಾ, ಅರ್ಜೆಂಟೈನಾ, ಗ್ರೇಟ್ ಬ್ರಿಟನ್, ಚೀನಾ, ಜರ್ಮನಿ, ನೆದರ್ ಲ್ಯಾಂಡ್ಸ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ಯುಎಸ್ಎ ಸೇರಿದಂತೆ ಒಟ್ಟು 9 ತಂಡಗಳು ತಮ್ಮ ಸ್ಥಾನಗಳನ್ನು ಗಟ್ಟಿಗೊಳಿಸಿಕೊಂಡಿದ್ದು, ಈ ಪಟ್ಟಿಗೆ ಭಾರತವೂ ಸೇರಿಕೊಂಡಿದೆ. ತೀರಾ ಬಡ ಪ್ರಜಾಪತಿ ಕುಟುಂಬದಲ್ಲಿ ಜನಿಸಿದ ೨೩ ವರ್ಷದ ರೀತೂ ಹರ್ಯಾಣದವರಾಗಿದ್ದು , ಈ ಹಿಂದೆ ರೈಲ್ವೆ ಉದ್ಯೋಗಿ ಆಗಿದ್ದರು. ಕಡಿಮೆ ಸಂಬಳ ಎಂಬ ಕಾರಣಕ್ಕೆ ಬಳಿಕ ಅದನ್ನು ತೊರೆದು ಪೂಲೀಸ್ ಕೆಲಸಕ್ಕೆ ಸೇರಿಕೊಂಡಿದ್ದಾರೆ. ತಂದೆಯ ತಳ್ಳುಗಾಡಿಯ ಬರುವ ಆದಾಯದಿಂದ ರೀತೂ ಶಿಕ್ಷಣ ಪಡೆದಿದ್ದರು.
ಕುಂಬಾರ ಜನಾಂಗದ ಹೆಮ್ಮೆಯ ಕುವರಿ : ಭಾರತ ಮಹಿಳಾ ಹಾಕಿ ತಂಡದ ನಾಯಕಿ ರೀತೂ ರಾಣಿ
sports
1 Min Read