ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಜೆಇಇ ಮೇನ್ ಹಾಗೂ ಜೆಇಇ ಅಡ್ವಾನ್ಸ್ ಡ್ ಎರಡೂ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಉನ್ನತಸ್ಥಾನ ಪಡೆದಿರುವ ಬೆಂಗಳೂರಿನ ಲಕ್ಷ್ಯ ಅವರು ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (ಐಐಟಿ) ಇಲ್ಲಿ ಬಿಟೆಕ್ (ಇಲೆಕ್ಟ್ರಿಕಲ್ ಇಂಜಿನಿಯರಿಂಗ್) ಗೆ ಪ್ರವೇಶ ಪಡೆದಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ, ಮೂಲತಃ ಮಂಗಳೂರು ಕುದ್ರೋಳಿಯವರಾದ ಲಕ್ಷ್ಯ ಅವರು 2018-19ನೇ ಸಾಲಿನ ಪಿಯೂಸಿ(ಸಿಬಿಎಸ್ಇ) ಪರೀಕ್ಷೆಯಲ್ಲಿ 97 ಶೇಕಡಾ ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಅಲ್ಲದೆ ಈ ಬಾರಿಯ ಕರ್ನಾಟಕ ಸಿಇಟಿ ಪರೀಕ್ಷೆಯಲ್ಲಿ 30ನೇ ರ್ಯಾಂಕ್ ಗಳಿಸಿದ್ದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ನಡೆದ ರಾಷ್ಟ್ರಮಟ್ಟದ ಕೆವಿಪಿವೈ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಅಗ್ರಸ್ಥಾನ (352 ರ್ಯಾಂಕ್) ಗಳಿಸಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಪ್ರತಿಷ್ಠಿತ ಐಐಟಿಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಜೆಇಇ ಮೈನ್ (ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್)ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 1574 ರ್ಯಾಂಕ್ ಹಾಗೂ ಜೆಇಇ ಅಡ್ವಾನ್ಸ್ ಪ್ರವೇಶ ಪರೀಕ್ಷೆಯಲ್ಲಿ ಲಕ್ಷ್ಯ ಅವರು ರಾಷ್ಟ್ರಮಟ್ಟದಲ್ಲಿ 1700ನೇ ರ್ಯಾಂಕ್ ಪಡೆದಿದ್ದಾರೆ. ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಎಜ್ಯುಕೇಷನಲ್ ರಿಸರ್ಚ್ ಆ್ಯಂಡ್ ಟ್ರೇನಿಂಗ್ (ಡಿಎಸ್ಇಆರ್ಟಿ) ಅಡಿ ನಡೆಸುವ ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್ (NTSE)ನ ಸ್ಕಾಲರ್ ಶಿಪ್ ಪುರಸ್ಕೃತರಾಗಿದ್ದಾರೆ. 2017ನೇ ಸಾಲಿನ ಎಸ್ಸೆಸ್ಸೆಲ್ಸಿ (ಐಸಿಎಸ್ಇ) ಪರೀಕ್ಷೆಯಲ್ಲಿ ಲಕ್ಷ್ಯ 98.4% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು.
ಮಂಗಳೂರು ಕುದ್ರೋಳಿ ನಿವಾಸಿಗಳಾದ ದಿ. ಜನಾರ್ಧನ ಮತ್ತು ವಾರಿಜ ದಂಪತಿಯ ಪುತ್ರ ಜಗದೀಶ್ ಎಂ ಹಾಗೂ ಕಪಿತಾನಿಯೋ ನಿವಾಸಿ ಭೋಜ ಸಾಲ್ಯಾನ್ ಮತ್ತು ಪದ್ಮಾವತಿ ದಂಪತಿಯ ಪುತ್ರಿ ಶರ್ಮಿಳಾ ಅವರ ಹಿರಿಯ ಪುತ್ರಿಯಾದ ಲಕ್ಷ್ಯ ಅವರು ಇಂಜಿನಿಯರಿಂಗ್ ನಲ್ಲೂ ಉನ್ನತ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.

