ಚಿತ್ರದುರ್ಗದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸಿದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸೇಕ್ರೆಡ್ ಹಾರ್ಟ್ಸ್ ಪ್ರೌಢಶಾಲೆ ಕುಲಶೇಖರ, ಮಂಗಳೂರು ಇಲ್ಲಿಯ ವಿದ್ಯಾರ್ಥಿನಿ ದೀಕ್ಷಾ ಉದ್ದ ಜಿಗಿತ, ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಹಾಗೂ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಮುಖ್ಯೋಪಾಧ್ಯಾಯಿನಿ ಸಿಸಿಲಿಯಾ ಮೆಂಡೊನ್ಸಾರ ಪ್ರೋತ್ಸಾಹ, ದೈಹಿಕ ಶಿಕ್ಷಣ ಶಿಕ್ಷಕಿ ಫ್ಲಾವಿಯಾ ಪಾಸ್ರ ಮಾರ್ಗದರ್ಶನ ಹಾಗೂ ಮಿಲಾಗ್ರಿಸ್ ಹೈಸ್ಕೂಲ್ನ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣರಿಂದ ತರಬೇತಿ ಪಡೆಯುತ್ತಿದ್ದಾಳೆ. ಈಕೆ ನೀರುಮಾರ್ಗದ ತಿಮ್ಮಪ್ಪ ಮೂಲ್ಯ ಹಾಗೂ ಜಯಂತಿಯವರ ಪುತ್ರಿ.
ತ್ರಿವಿಧ ಜಿಗಿತದಲ್ಲಿ ದೀಕ್ಷಾ ಮೂಲ್ಯ ರಾಷ್ಟ್ರ ಮಟ್ಟಕ್ಕೆ
sports
1 Min Read