ಕನ್ನಡ ಸಾಹಿತ್ಯದ ಕಾವ್ಯ ಪುರಾಣಗಳಲ್ಲಿ ಅರುವತ್ತಮೂರು ಪುರಾತನರ ಪ್ರಸ್ತಾಪ ಉಂಟಾಗುತ್ತದೆ. ಬಸವ ಯುಗದ ಪೂರ್ವದಲ್ಲಿ ಈ ಅರುವತ್ತಮೂರು ಪುರಾತನರು ದೇಶದ ದಕ್ಷಿಣ ಭಾಗದಲ್ಲಿ ವಿಜೃಂಭಿಸಿದ್ದು ರಮಿಳು ಸಾಹಿತ್ಯದಲ್ಲಿ ಉಲ್ಲೇಖಿಸಲ್ಪಟ್ಟಿದೆ ಇವರೆಲ್ಲರೂ ಚೋಳ, ಚೇರ, ಪಾಂಡ್ಯ ದೊರೆಗಳ ಕಾಲದಲ್ಲಿ ಇದ್ದರೆಂದು ಗೊತ್ತಾಗುತ್ತದೆ. ಈ ಅರುವತ್ತಮೂರು ಪುರಾತನರು ವಿವಿಧ ಜಾತಿ ವರ್ಗಕ್ಕೆ ಸೇರಿದವರಾಗಿದ್ದು, ಪ್ರಮುಖವಾಗಿ ಬ್ರಾಹ್ಮಣ, ವೈಶ್ಯ, ಮೀನುಗಾರ, ಬೇಡ, ಗಾಣಿಗ, ಆದಿಶೈವ, ಒಕ್ಕಲಿಗ, ಅಗಸ, ನೇಕಾರ, ಕುಂಬಾರ, ಕುರುಬ, ಗೋಪಾಲ, ದಲಿತ ಮುಂತಾದ ವೃತ್ತಿನಿರತ ಸಮಾಜಕ್ಕೆ ಸೇರಿದವರು ಇವರಲ್ಲಿ ಕುಶವನರ್ (ಕುಂಬಾರ) ಜನಾಂಗಕ್ಕೆ ಸೇರಿದ ತಿರುನೀಲಕಂಠದೇವರು ಎಂಬುವವರು ಪ್ರಮುಖರು.
ಒಂದು ಕಾಲದಲ್ಲಿ ಚೋಳ ಮಂಡಲದಲ್ಲಿ ಪನ್ನಾಂಬಲ ಎಂಬ ಪುರವು ಚೋಳ ದೇಶದಲ್ಲಿ ತುಂಬಾ ಪ್ರಸಿದ್ಧಿಯನ್ನು ಹೊಂದಿತ್ತು. ಶಿವನು ಪೊನ್ನಾಂಬಲನಾಥ ಎಂಬ ಹೆಸರಿನಿಂದ ಆರಾಧಿಸುಂತ್ತಿದ್ದರು. ಈ ನಗರವು ಭಕ್ತರಿಗೆ ಹೆಸರು ಮಾಡಿದ್ದಿತು. ಈ ಪುರದಲ್ಲಿ ಕುಂಬಾರ ಜನಾಂಗಕ್ಕೆ ಸೇರಿದ ತಿರುನೀಲಕಂಠರೆಂಬುವವರು ತಮ್ಮ ಧರ್ಮಪತ್ನಿ ಸತ್ಯವತಿಯೊಂದಿಗೆ ಮಹಾ ಶಿವ ಭಕ್ತನಾಗಿ ಜೀವಿಸುತ್ತಿದ್ದನು.
“ತಿರುನೀಲಕಂಠನು ಪೊನ್ನಾಂಬಲೇಶ್ವರನನ್ನು” ದಿನಕ್ಕೆ ಮೂರು ಬಾರಿ ಭಕ್ತಿಯಿಂದ ಪೂಜಿಸುತ್ತಿದ್ದರು. ಒಂದು ದಿನ ಇರುಳಿನಲ್ಲಿ ಅರ್ಚನೆ ಮಾಡಿ ಮನೆಗೆ ಹಿಂದುರಿಗಿ ಬರುತ್ತಿದ್ದಾಗ ವೇಶ್ಯಾಗ್ರಹದ ವಿಲಾಸಿನಿಯೊಬ್ಬಳು ಊಟ ಮಾಡಿ ಕೈತೊಳೆದ ಎಂಜಲಾದ ನೀರನ್ನು ಹೊರಗೆಸೆಯುವಾಗತಿರುನೀಲಕಂಠರ ಮೇಲೆ ಬೀಳಲು ಅವರು ವ್ಯಸನಗೊಂಡು “ಶಂಭೋಕರ ಪೊನ್ನಂಬಲೇಶಾ” ಎಂದು ಉಚ್ಛರಿಸಿದರು. ಇದನ್ನು ಕೇಳಿದ ವಿಲಾಸಿನಿ ಗಾಬರಿಗೊಂಡು ತಿರುನೀಲಕಂಠರ ಪಾದಕ್ಕೆ ಎರಗಿ ಮನೆಗೆ ಕರೆದುಕೊಂಡು ಹೋಗಿ ಸುಗಂಧಭರಿತ ಪರಿಮಳ ಸಲಿಲದಿಂದ ಮಜ್ಜನ ಮಾಡಿಸಿ ಕ್ಷಮೆಯಾಚಿಸಿದಳು.
ಸಮಯ ಮೀರಿ ಮನೆಗೆ ಬಂದ ತಿರುನೀಲಕಂಠರು ಸುಗಂಧ ಭರಿತರಾಗಿದ್ದನ್ನು ಕಂಡು ಸತ್ಯವತಿಯು ಶಂಕೆಗೆ ಒಳಗಾಗಿ ಮನಸ್ಸಿಲ್ಲದ ಮನಸ್ಸಿಂದ ದೂರದಿಂದಲೇ ಉಪಚರಿಸಿದಳು. ಪತ್ನಿಯ ಭಾವನೆಯನ್ನು ಗಮನಿಸಿದ ತಿರುನೀಲಕಂಠರು ನಸುನಗುತ್ತ ಪ್ರೀತಿಯಿಂದ ಸತ್ಯವತಿಯ ಸೆರಗನ್ನು ಹಿಡಿಯಲೆತ್ನಿಸಿದಾಗ “ಎನ್ನ ಮುಟ್ಟಿದೆಯಾದೊಡೆ ಪೊನ್ನಾಂಬಲನಾಥನ ಆಣೆ” ಎಂದು ಸತ್ಯವತಿ ಆಣೆ ಇಡುವಳು. ಶಿವನ ಆಣೆಗೆ ಕಟ್ಟುಬಿದ್ದ ದಂಪತಿಗಳು ಪರಸ್ಪರ ಮುಟ್ಟದೆ ಎಂಭತ್ತು ವರ್ಷಗಳನ್ನು ಕಳೆದು ವೃದ್ಧರಾದರು.
ಈ ವೃದ್ಧ ದಂಪತಿಗಳನ್ನು ಇನ್ನಷ್ಟು ಪರೀಕ್ಷಿಸುವ ಇಚ್ಛೆಯಿಂದ ಶಿವನು ಭಿಕ್ಷುಕನ ವೇಷದಲ್ಲಿ ತಿರುನೀಲಕಂಠರ ಬಳಿಗೆ ಬಂದು ಆತಿಥ್ಯವನ್ನು ಸ್ವೀಕರಿಸಿ ಭಿಕ್ಷಾಪಾತ್ರೆಯೊಂದನ್ನು ಅವರ ಬಳಿ ಇಟ್ಟು “ಇದನ್ನು ಸುರಕ್ಷಿತವಾಗಿ ಇಟ್ಟಿರಿ, ನಾಳೆ ಬಂದು ತೆಗೆದುಕೊಂಡು ಹೋಗುವೆ” ಎಂದು ಹೇಳಿ ಹೊರಟುಹೋದನು. ತಿರುನೀಲಕಂಠರು ಅದನ್ನು ಒಂದು ಭದ್ರವಾದ ಪೆಟ್ಟಿಗೆಯಲ್ಲಿಟ್ಟರು. ಎರಡನೆಯ ದಿನ ಭಿಕ್ಷುಕನು ಬಂದು ಪಾತ್ರೆ ಕೇಳಲು ಪೆಟ್ಟಿಗೆ ತೆರೆದು ನೋಡುವಾಗಲೆ ಪಾತ್ರೆ ಮಾಯವಾಗಿತ್ತು. ಅದೇ ಪಾತ್ರೆ ಬೇಕೆಂದು ಭಿಕ್ಷುಕ ಹಠಹಿಡಿದನು. ಅದರ ಬದಲಿಗೆ ಚಿನ್ನದ ಪಾತ್ರೆ ಕೊಡುವುದಾಗಿ ಹೇಳಿದರು. ಅದಕ್ಕೊಪ್ಪದೆ “ಪುರಜನರ ಸಮ್ಮುಖದಲ್ಲಿ ಪೊನ್ನಾಂಬಲೇಶನ ಸಾನಿಧ್ಯದಲ್ಲಿ ಇದರ ತೀಮರ್ಾನವಾಗಬೇಕೆಂದು” ಭಿಕ್ಷುಕನು ಆಗ್ರಹಿಸಿದನು. ಅದಕ್ಕೆ ಒಪ್ಪಿ ದೇವಸ್ಥಾನಕ್ಕೆ ಆಗಮಿಸಿದರು. ಪುರಜನರನ್ನು ಉದ್ದೇಶಿಸಿ ಭಿಕ್ಷುಕರೂಪಿ ಶಿವನು “ನೋಡಿ ಪುರಜನರೇ ನಾನು ಜೋಪಾನವಾಗಿ ಇಇಸಲು ಕೊಟ್ಟ ಪಾತ್ರೆ ಮಾಯವಾಗಿದೆ ಎಂದು ಈ ವ್ಯಕ್ತಿ ಹೇಳುತ್ತಾನೆ. ನನ್ನ ಪಾತ್ರೆ ಮಹತ್ವವುಳ್ಳದ್ದು, ಈಗ ಅದು ಮಾಯವಾಗಿದೆ ಎಂದು ಹೇಳಿದರೆ ನಂಬಲು ಸಾಧ್ಯವಿಲ್ಲ. ಆದ್ದರಿಂದ ಪತಿ-ಪತ್ನಿಯರು ಒಬ್ಬರಿಗೊಬ್ಬರು ಕೈಡಿದು ದೇವಸ್ಥಾನದ ಈ ಹೊಂಡದಲ್ಲಿ ಮಿಂದು ತಮ್ಮದೇನೂ ತಪ್ಪಿಲ್ಲ ಎಂದು ಘೋಷಿಸಿ ಪುರಜನರಿಗೆ ನಮಸ್ಕರಿಸಿದರೆ ಬಿಟ್ಟು ಬಿಡುತ್ತೇನೆ” ಎಂದು ಹೇಳಿದನು. ಹಿಂದೆ ಸತ್ಯವತಿಯು ಮುಟ್ಟದಂತೆ ಪೊನ್ನಾಂಬಲೇಶನ ಆಣೆ ಹಾಕಿರುವುದರಿಂದ ಅದು ಸಾಧ್ಯವಿಲ್ಲವೆಂದು ತಿರುನೀಲಕಂಠರು ಹೇಳಿದರು. ಅದಕ್ಕೆ ಭಿಕ್ಷುಕನು “ಪರಸ್ಪರ ಮುಟ್ಟಲು ಸಾಧ್ಯವಿಲ್ಲದಿದ್ದರೆ ಪರಸ್ಪರ ಕೋಲು ಹಿಡಿದು ನೀರಿನಲ್ಲಿ ಮುಳುಗಿ ಏಳಬಹುದಲ್ಲವೇ ” ಎಂದ ಇದಕ್ಕೆ ಒಪ್ಪಿ ಇಬ್ಬರು ಕೋಲು ಹಿಡಿದು ಮುಳುಗಿ ಎದ್ದರು. ಏಳುತ್ತಲೇ ಮೊದಲು ವೃದ್ಧರಾಗಿದ್ದ ತಿರುನೀಲಕಂಠ-ಸತ್ ಯವತಿ ದಂಪತಿಗಳು ಮೊದಲಿನ ನವ ಯೌವನ ಧರಿಸಿದ್ದರು. ಪೊನ್ನಾಂಬಲೇಶನ ಆಣೆಯನ್ನು ಪತ್ನಿ ವಿಧಿಸಿದ್ದನ್ನು ಎಂತಹಾ ಪರಿಸ್ಥಿತಿ ಬಂದರೂ ಎದುರಿಸಿದ ತಿರುನೀಲಕಂಠರ ಭಕ್ತಿಗೆ ಮೆಚ್ಚಿ ಶಿವನು ತನ್ನ ನಿಜ ಸ್ವರೂಪವನ್ನು ತೋರಿಸಿ ಪುಷ್ಪಕ ವಿಮಾನದಲ್ಲಿ ಕೈಲಾಸಕ್ಕೆ ಕರೆದೊಯ್ದು ಸತಿ-ಪತಿಗಳಿಗೆ ಗಣ ಪದವಿಯನ್ನು ಕೊಟ್ಟನು.