ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಾಸರಗೋಡು ಬದಿಯಡ್ಕದ ನೃತ್ಯ ಕೆಲಾವಿದೆ ನಿಶ್ಮಿತಾ ಅವರು ಮಡಿಲು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನೀಡಲಾಗುವ `ಮಡಿಲು ಸಮ್ಮಾನ್ ಪುರಸ್ಕಾರ 2018 ‘ ಪಡೆದಿದ್ದಾರೆ.
ಇತ್ತೀಚೆಗೆ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಅವರು ಪುರಸ್ಕಾರ ಸ್ವೀಕರಿಸಿದರು. ಕಾಸರಗೋಡು ಬದಿಯಡ್ಕ ನಿವಾಸಿಗಳಾದ ಕೃಷ್ಣ ಮೂಲ್ಯ ಹಾಗೂ ಶುಭವತಿ ದಂಪತಿಗಳ ಸುಪುತ್ರಿ ನಿಶ್ಮಿತಾ ಅವರು `ಡ್ಯಾನ್ಸ್ ಆಂಡ್ ಬೀಟ್ಸ್; ಎಂಬ ನೃತ್ಯ ತರಬೇತಿ ಕೇಂದ್ರವನ್ನು ಹೊಂದಿದ್ದಾರೆ. ಈ ಸಂಸ್ಥೆಯ ಎರಡು ಶಾಖೆಗಳನ್ನು ಹೊಂದಿದ್ದು . ಈ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಕೇರಳ ಕಲೋತ್ಸವ ಹಾಗೂ ತುಳುವೆರೆ ಆಯನೊ ಇತ್ಯಾದಿ ಸ್ಪರ್ಧೆಯಲ್ಲಿ ಈ ಸಂಸ್ಥೆಯ ವಿದ್ಯಾರ್ಥಿಗಳು ಅನೇಕ ಪುರಸ್ಕಾರವನ್ನು ಗಿಟ್ಟಿಸಿಕೊಂಡಿದ್ದಾರೆ.
ಎಳೆವಯಸ್ಸಿನಿಂದಲೇ ನೃತ್ಯದತ್ತ ಆಕರ್ಷಿತರಾದ ನಿಶ್ಮಿತಾ ಅವರು ಜನಪದ ನೃತ್ಯ , ಸೆಮಿಕ್ಲಾಸಿಕಲ್ , ಕಥಕ್, ಭರತನಾಟ್ಯ ಮುಂತಾದ ಅನೇಕ ನೃತ್ಯ ಪ್ರಕಾರಗಳನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮದೇ ಸ್ವಂತ ಕಲ್ಪನೆಯಲ್ಲಿ ಅಚ್ಚುಕಟ್ಟಾಗಿ ಆಕರ್ಷಣಿಯವಾಗಿ ಪ್ರಬುದ್ಧರೆಣಿಸಿರುವ ಅವರು ಕಲಾರಸಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಮಕ್ಕಳಿಗೆ ನೃತ್ಯಗಳನ್ನು ಧಾರೆ ಎರೆಯುತ್ತಿರುವ ಇವರ ಪ್ರತಿಭೆ ಹಾಗೂ ಸೇವೆಯನ್ನು ಗುರುತಿಸಿ ಈ ಪುರಸ್ಕಾರವನ್ನು ಮಡಿಲು ಸಾಂಸ್ಕೃತಿಕ ಟ್ರಸ್ಟ್ ನೀಡಿದೆ.
————————————————————————————————————————————————————–
ಈ ಸುದ್ದಿಯನ್ನೂ ಓದಿರಿ…