ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಶಿವಮೊಗ್ಗದ ಜವಾಹರ್ ಲಾಲ್ ನೆಹರೂ ಸ್ಟೇಡಿಯಂ ನಲ್ಲಿ ನಡೆದ ೩೮ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ನಾರಾಯಣ ಮೂಲ್ಯ ಅವರು 40ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ೪೦೦ ಮೀ ಓಟದಲ್ಲಿ ಪ್ರಥಮ, ೧೫೦೦ ಮೀ ಓಟದಲ್ಲಿ ಪ್ರಥಮ ಹಾಗೂ ೮೦೦ ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಗೆ ಆಯ್ಕೆಯಾಗಿದ್ದಾರೆ.
ನಾರಾಯಣ ಅವರು ಮಂಗಳೂರು ಎಚ್ ಪಿಸಿಎಲ್ ನ ಬಾಟಲಿಂಗ್ ಪ್ಲಾಂಟ್ ನ ಉದ್ಯೋಗಿಯಾಗಿದ್ದಾರೆ.
ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಗೆ ನಾರಾಯಣ ಮೂಲ್ಯ ಆಯ್ಕೆ
sports
1 Min Read