ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಂಗಳೂರಿನಲ್ಲಿ ನಿರ್ಮಿಸುತ್ತಿರುವ ಭವ್ಯ ಕುಲಾಲ ಭವನವು ನಮ್ಮ ಸಮಾಜದ ದ್ಯೋತಕವಾಗಿದೆ, ಇದನ್ನು ನಿರ್ಮಿಸಲು ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾ ಅಗತ್ಯವಿದೆ, ಸಮಾಜ ಸೇವೆಯೇ ಸಂಘದ ಮುಖ್ಯ ಧ್ಯೇಯವಾಗಿದೆ ಎಂದು ಕುಲಾಲ ಸಂಘ ಮುಂಬೈ ಇದರ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ನುಡಿದರು.

ಅ. 28 ರಂದು ವಡಾಲ ಪರಿಸರದಲ್ಲಿರುವ ಎನ್ ಕೆ ಇ ಎಸ್ ಶಾಲಾ ಸಭಾಗ್ರಹದಲ್ಲಿ ನಡೆದ ಕುಲಾಲ ಸಂಘ, ಮುಂಬಯಿ ಇದರ 88ನೇ ವಾರ್ಷಿಕ ಮಹಾಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಡಿ. 3 ರಂದು ಪುಣೆಯಲ್ಲಿ ಕುಲಾಲ ಸಂಘ, ಮುಂಬಯಿಯ ಅಧೀನದಲ್ಲಿರುವ ಜ್ಯೋತಿ ಕೋ.ಸೊಸೈಟಿಯ 5ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿದರಲ್ಲದೆ ಸರ್ವರ ಸಹಕಾರವನ್ನು ಕೇಳಿ, ಸದುಪಯೋಗವನ್ನು ಪಡೆಯಬೇಕೆಂದರು.

ಸಂಘದ ಉಪಾಧ್ಯಕ್ಷ ರಘು ಮೂಲ್ಯ , ಕೋಶಾಧಿಕಾರಿ ಜಯ ಎಸ್. ಅಂಚನ್, ಜ್ಯೋತಿ ಕೋ. ಸೊಸೈಟಿಯ ಅಧ್ಯಕ್ಷ ಗಿರೀಶ್ ಬಿ. ಸಾಲಿಯಾನ್, ಸಂಘದ ಮಹಿಳಾಧ್ಯಕ್ಷೆ ಮಮತಾ ಗುಜರನ್ ಸಂಧರ್ಭೋಚಿತವಾಗಿ ತಮ್ಮ ಅನಿಸಿಕೆಗಳನ್ನು ತಿಳಿಯಪಡಿಸಿದರು. ಗೌ.ಪ್ರ.ಕಾರ್ಯದರ್ಶಿ ಕರುಣಾಕರ ಬಿ.ಸಾಲಿಯಾನ್ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಸಂಘದ ಮುಖವಾಣಿ ‘ಅಮೂಲ್ಯ’ ತ್ರೈಮಾಸಿಕದ 20ನೇ ಹುಟ್ಟುಹಬ್ಬದ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ‘ಅಮೂಲ್ಯ ತ್ರೈಮಾಸಿಕ ಸಂಚಿಕೆಯ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ಕವಿಯತ್ರಿ, ಮೊಗವೀರ ಪತ್ರಿಕೆಯ ಮಾಜಿ ಸಂಪಾದಕಿ , ಸಾಫಲ್ಯ ಪತ್ರಿಕೆ ಯ ಸಂಪಾದಕಿ ಡಾ. ಜಿ. ಪಿ.ಕುಸುಮಾ ಆಗಮಿಸಿದ್ದರು.

ಡಾ. ಜಿ.ಪಿ.ಕುಸುಮಾ ಅವರು ಮುಂಬಯಿಯಲ್ಲಿ ಪತ್ರಿಕೋದ್ಯಮ ಬೆಳೆದು ಬಂದ ಹಲವು ಮಜಲುಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಅದ್ಯಪಾಡಿ ವಾಮನ್ ರವರು ಡಾ. ಜಿ. ಪಿ. ಕುಸುಮಾರವರನ್ನು ಸಭೆಗೆ ಪರಿಚಯಿಸಿದರು. ಅಮೂಲ್ಯ ತ್ರೈಮಾಸಿಕದ ಸಂಪಾದಕರಾದ ಶಂಕರ್ ವೈ. ಮೂಲ್ಯರವರು ಅಮೂಲ್ಯ ಪತ್ರಿಕೆ ನಡೆದು ಬಂದ ದಾರಿಯನ್ನು ಸಭೆಗೆ ತಿಳಿಸಿದರು. ರಘುನಾಥ ಕರ್ಕೇರ ಭಾಯಂದರ್ ರವರು ಅಮೂಲ್ಯ ತ್ರೈಮಾಸಿಕ ಸಂಚಿಕೆಯ ಬಿಡುಗಡೆ ಸಮಾರಂಭದ ನಿರೂಪಣೆ ಮಾಡಿದರು.

ಸಂಘದ ಮಹಿಳೆಯರಿಂದ ದೇವತಾ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾರಂಭಗೊಂಡತು. ನಂತರ ವರದಿ ವರ್ಷ ದಲ್ಲಿ ಗತಿಸಿದ ಸಮಾಜದ ಹಿರಿಯರಿಗೆ ಶ್ರಧ್ಧಾಂಜಲಿ ಕೋರಿ ಎರಡು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಗೌ.ಪ್ರ.ಕಾರ್ಯದರ್ಶಿ ಶ್ರೀ ಕರುಣಾಕರ ಬಿ.ಸಾಲಿಯಾನ್ 2017-18ರ ಸಾಲಿನ ವಾರ್ಷಿಕ ವರದಿ ಹಾಗೂ ಆಯ-ವ್ಯಯ ಪಟ್ಟಿ ಮಂಡಿಸಿದ ನಂತರ ಅದನ್ನು ಸಂಘದ ಸದಸ್ಯರ ಅನುಮೋದನೆಯೊಂದಿಗೆ ಸರ್ವಾನುಮತದಿಂದ ಮಂಜೂರು ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಏಳಿಗೆಗಾಗಿ ಶ್ರಮಿಸಿದ ಹಿರಿಯ ಕಾರ್ಯಕರ್ತರನ್ನು ಶಾಲು ಫಲ ಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ವರ್ಷದ ಅತ್ಯುತ್ತಮ ಕಾರ್ಯಕರ್ತರಿಗೆ ಕೊಡಮಾಡುವ ದಿ| ಪಿ. ಕೆ. ಸಾಲಿಯಾನ್ ರೋಲಿಂಗ್ ಕಪ್ ನ್ನು ಮೀರಾರೋಡ್-ವಿರಾರ್ ನ ಕಾರ್ಯಕರ್ತ ಚಂದ್ರಹಾಸ್ ಮೀರಾರೋಡ್ ರವರಿಗೆ ನೀಡಲಾಯಿತು. ರಾಷ್ಟ್ರಪತಿಯಿಂದ ಪುರಸ್ಕೃತ ನಮ್ಮ ಸಮಾಜದ ಖ್ಯಾತ ವೈದ್ಯ ಡಾ. ಪುಷ್ಪರಾಜ್ ರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ ಪ್ರತಿಭಾ ಪುರಸ್ಕಾರ ಹಾಗೂ ವಿಧ್ಯಾರ್ಥಿವೇತನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಡಿ. ಐ. ಮೂಲ್ಯ, ಜಯರಾಜ್ ಪಿ. ಸಾಲಿಯಾನ್, ಪಿ. ಶೇಖರ್ ಮೂಲ್ಯ, ಉಮೇಶ್ ಬಂಗೇರ ಮೀರಾರೋಡ್, ಸುನೀಲ್ ಕುಲಾಲ್, ಪುಷ್ಪಲತಾ ಸಾಲಿಯಾನ್, ಸುಂದರ ಮೂಲ್ಯ ಮೀರಾರೋಡ್, ರಘು ಬಿ. ಮೂಲ್ಯ, ಗೋಪಾಲ ಬಂಗೇರ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಮನೋರಂಜನೆಯ ಅಂಗವಾಗಿ ಸಂಘದ ಐದು ಉಪಸಮಿತಿಯ ಮಹಿಳೆಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಲಘು ಉಪಾಹಾರವನ್ನು ವ್ಯವಸ್ಥೆಗೊಳಿಸಲಾಗಿತ್ತು. ಕಾರ್ಯಕ್ರಮದ ಕೊನೆಗೆ ರಘು ಬಿ. ಮೂಲ್ಯರವರು ವಂದನಾರ್ಪಣೆಗೈದರು.

