ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್ ನ್ಯೂಸ್) : ಐಸಿಎಂಎಎಸ್ ಸಂಸ್ಥೆಯವರು ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆಸಿದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಯಂದರ್ ಎಸ್.ಎಂ. ಪಬ್ಲಿಕ್ ಸ್ಕೂಲ್ ನ ನಾಲ್ಕನೇ ತರಗತಿ ವಿದ್ಯಾರ್ಥಿನಿ ಚಿರಶ್ರೀ ಎಸ್ ಬಂಜನ್ ದ್ವಿತೀಯ ಬಹುಮಾನ ಪಡೆದಿದ್ದಾಳೆ. ಮೂಲತಃ ಮಂಗಳೂರಿನ ಸುರತ್ಕಲ್ ನವರಾದ ಭಾಯಂದರ್ ನಿವಾಸಿ ಶ್ರೀನಿವಾಸ್ ವಿ ಬಂಜನ್ ಹಾಗೂ ರೇಖಾ ಎಸ್ ಬಂಜನ್ ಅವರ ಪುತ್ರಿಯಾಗಿರುವ ಚಿರಶ್ರೀಯ ಸಾಧನೆಗೆ ಶಿಕ್ಷಕರು, ಆಡಳಿತ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಚಿರಶ್ರೀ ಗೆ ದ್ವಿತೀಯ ಬಹುಮಾನ
Students corner
1 Min Read


