ಮುಂಬಯಿ : ಕುಲಾಲ ಸಂಘ ಮುಂಬಯಿ ಸಂಸ್ಥೆಯು ರಾಷ್ಟ್ರಮಟ್ಟದ ನೃತ್ಯಪರ್ವ ಕಾರ್ಯಕ್ರಮ `ಕುಲಾಲ ಡ್ಯಾನ್ಸ್ ಫೆಸ್ಟಿವಲ್-2’ವನ್ನು ರವಿವಾರ ಮಾಟುಂಗ ಸರ್ ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಆಯೋಜಿಸಿತ್ತು. ಮಾಣಿಲ ಶ್ರೀ ಮಹಾಲಕ್ಷ್ಮೀ ಶ್ರೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.
ಕುಲಾಲ ಸಂಘದ ಅಧ್ಯಕ್ಷ ಅಧ್ಯಕ್ಷ ಗಿರೀಶ್ ಬಿ.ಸಾಲ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭಲ್ಲಿ ಮುಖ್ಯ ಅತಿಥಿಗಳಾಗಿ ಬರ್ಕೆ ಫ್ರೆಂಡ್ಸ್ ಮಂಗಳೂರು ಅಧ್ಯಕ್ಷ ಯಜ್ಞೇಶ್ ಮೂಲ್ಯ (ಬರ್ಕೆ ಯದ್ದು), ಗೌರವ ಅತಿಥಿಗಳಾಗಿ ಮೊಗವೀರ ಬ್ಯಾಂಕ್ನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್, ಉಪಾಧ್ಯಕ್ಷ ಸುರೇಶ್ ಆರ್.ಕಾಂಚನ್, ಆಹಾರ್ ಅಧ್ಯಕ್ಷ ಆದರ್ಶ್ ಶೆಟ್ಟಿ, ಬಿಎಸ್ಕೆಬಿ ಅಸೋಸಿಯೇಶನ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ಫಿಲಿಪ್ಸ್ ಸಂಸ್ಥೆಯ ಉನ್ನತಾಧಿಕಾರಿ ಹರೀಶ್ ಸಾಲ್ಯಾನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರಾ ಎಸ್.ಪುತ್ರನ್, ರಂಗತಜ್ಞ ಡಾ| ಭರತ್ ಕುಮಾರ್ ಪೊಲಿಪು, ಉದ್ಯಮಿ ರಮಾನಂದ ಬಂಗೇರಾ ನಾಸಿಕ್ ಉಪಸ್ಥಿತರಿದ್ದು ಶುಭಾರೈಸಿದರು. ಎಸ್.ಎಂ.ಶೆಟ್ಟಿ ಕಾಲೇಜು ಪೊವಾಯಿ ಇದರ ಪ್ರಾಂಶುಪಾಲ ಡಾ| ಶ್ರೀಧರ ಎಸ್.ಶೆಟ್ಟಿ ಅವರು `ಪ್ರಸ್ತುತ ಶಿಕ್ಷಣ ನೀತಿ’ ವಿಷಯದಲ್ಲಿ ಉಪನ್ಯಾಸ ನೀಡಿದರು.
ಕುಲಾಲ ಸಂಘದ ಗೌರವಾಧ್ಯಕ್ಷ ಪಿ.ಕೆ.ಸಾಲ್ಯಾನ್, ಉಪಾಧ್ಯಕ್ಷ ಪಿ.ದೇವದಾಸ್ ಎಲ್.ಕುಲಾಲ್, ಗೌ| ಕಾರ್ಯದರ್ಶಿ ಡಿ.ಐ ಮೂಲ್ಯ, ಗೌ| ಕೋಶಾಧಿಕಾರಿ ಜಯ ಎಸ್.ಅಂಚನ್, ಸಾಮಾಜಿಕ ಮತ್ತು ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಎಂ.ಬಂಗೇರ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಮತಿ ಎಸ್. ಬಂಜನ್, ಯುವ ವಿಭಾಗದ ಕಾರ್ಯಾಧ್ಯಕ್ಷ ಮನೋಜ್ ಸಾಲಿಯಾನ್, ನಾರಾಯಣ ನೆತ್ರೆಕೆರೆ, ಕರುಣಾಕರ ಮೂಲ್ಯ ವೇದಿಕೆಯಲ್ಲಿ ಅಸೀನರಾಗಿದ್ದರು.
ನಡೆಸಲಾದ ಸ್ಪರ್ಧೆಯಲ್ಲಿ ಸಮಾಜ ಯುವಜನತೆಯು ಶಾಸ್ತ್ರೀಯ ಸಮೂಹ ನೃತ್ಯ, ಜಾನಪದ ಸಮೂಹ ನೃತ್ಯ, ಪಾಶ್ಚಿಮಾತ್ಯ ಸಮೂಹ ನೃತ್ಯ, ಬಾಲಿವುಡ್ ಸಮೂಹ ನೃತ್ಯ ವೈಭವಗಳನ್ನು ಪ್ರದರ್ಶಿಸಿದರು.
ವಾಸು ಬಂಜನ್ ಅವರು ಮಂತ್ರದೇವತೆಗೆ ಆರತಿ ನೆರವೇರಿಸುವ (ಸ್ಲೈಡ್ಶೋ ಮುಖೇನ) ಮೂಲಕ ಕಾರ್ಯಕ್ರಮ ಆದಿಗೊಂಡಿತು. ಕು| ಕೀರ್ತಿ ಶ್ರೀ ಬಿ.ಮೂಲ್ಯ ಮತ್ತು ತಂಡದ ಸ್ವಾಗತನೃತ್ಯಗೈದರು. ಗಣೇಶ್ ಎರ್ಮಾಳ್ ನೃತ್ಯಗೀತೆ ಹಾಡಿದರು. ಸಾಮಾಜಿಕ ಮತ್ತು ಆರ್ಥಿಕ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಎಂ.ಬಂಗೇರಾ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಯಾನಂದ ಕತ್ತಲಸಾರ್ ಅವರು ಕುಲಾಲ ಸಂಘ ಮುಂಬಯಿ ಸಂಸ್ಥೆಯ ಆದಿಯಿಂದ ಈ ವರೇಗಿನ ಕಾರ್ಯವೈಖರಿಯನ್ನು ಸ್ಥೂಲವಾಗಿ ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಸಂಘಟಕ ಬಿ.ದಿನೇಶ್ ಕುಲಾಲ್ ಅತಿಥಿಗಳನ್ನು ಪರಿಚಯಿಸಿ ವಂದಿಸಿದರು.