ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಉದ್ಯಮಿ ಮಯೂರ್ ಉಳ್ಳಾಲ ಅವಿರೋಧವಾಗಿ ಪುನಾರಾಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ರಾಮ ಯು ಉಪ್ಪಿನಂಗಡಿ, ನಾರಾಯಣ ಸಿ ಪೆರ್ನೆ ಆಯ್ಕೆಯಾದರು. ನ 10 ರಂದು ಮಾತೃ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲಪ್ಪ ಕುಲಾಲ್, ಕೋಶಾಧಿಕಾರಿಯಾಗಿ ಪುಂಡರೀಕಾಕ್ಷ, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಬಸ್ತಿ, ಸಂಘಟನಾ ಕಾರ್ಯದರ್ಶಿಯಾಗಿ ಜಯಪ್ರಕಾಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನವೀನ ಕುಲಾಲ್ ಪುತ್ತೂರು, ಕ್ರೀಡಾ ಕಾರ್ಯದರ್ಶಿಯಾಗಿ ಮಾಧವ ನರಿಂಗಾನ, ಸೇವಾ ದಳಪತಿಯಾಗಿ ಪ್ರದೀಪ್ ಅತ್ತಾವರ, ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಮಮತಾ ಅಣ್ಣಯ್ಯ ಕುಲಾಲ್, ವೀರನಾರಾಯಣ ದೇವಸ್ಥಾನ ಅಧ್ಯಕ್ಷರಾಗಿ ಸುಂದರ ಕುಲಾಲ್ ಶಕ್ತಿನಗರ ಆಯ್ಕೆಯಾದರು. ಚುನಾವಣಾ ಅಧಿಕಾರಿಗಳಾಗಿ ಕುಲಾಲ ಸಮಾಜದ ಪ್ರಮುಖರಾದ ಭಾಸ್ಕರ ಪೆರುವಾಯಿ, ಲಕ್ಷ್ಮಣ ಕುಂದರ್, ಜಯಪ್ರಕಾಶ್ ಭಾಗವಹಿಸಿದ್ದರು. ಇದೇ ಸಂದರ್ಭ ಪದಾಧಿಕಾರಿಗಳ ಆಯ್ಕೆ ಬಗ್ಗೆ ಎರಡು ಗುಂಪುಗಳ ಮಧ್ಯೆ ಅಭಿಪ್ರಾಯ ವ್ಯತ್ಯಾಸ ಕಂಡುಬಂದಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ವಾಟ್ಸಪ್ ವಾಕ್ಸಮರ ನಡೆಯುತ್ತಿದೆ. ಮಯೂರ್ ಉಳ್ಳಾಲ ಅವರ ಹಿಂದಿನ ಅಧ್ಯಕ್ಷತೆಯ ಅವಧಿಯಲ್ಲಿ ಹಣಕಾಸಿನ ಲೆಕ್ಕಾಚಾರ ಸಹಿತ ಹಲವು ವಿಚಾರಗಳಲ್ಲಿ ಅಕ್ರಮಗಳು ನಡೆದಿದೆ ಎಂಬ ಆರೋಪ ಕೂಡಾ ಕೇಳಿಬಂದಿದೆ. ಅಲ್ಲದೆ ನೂತನ ಪದಾಧಿಕಾರಿ ಹುದ್ದೆಗೆ ಸಲ್ಲಿಸಲಾದ ಹಲವು ಉಮೇದುದಾರ ಅಭ್ಯರ್ಥಿಗಳ ಅರ್ಜಿಗಳನ್ನು ಕ್ಷುಲ್ಲಕ ನೆಪವೊಡ್ಡಿ ಅನರ್ಹಗೊಳಿಸಲಾಗಿದೆ ಎಂಬ ದೂರುಗಳೂ ಕೇಳಿ ಬಂದಿದೆ.