ಬೆಹರೈನ್ (ಏ.೧೪, ಕುಲಾಲ್ ವರ್ಲ್ಡ್ ನ್ಯೂಸ್): ಅನಿವಾಸಿ ಭಾರತೀಯ ಕುಲಾಲ ಸಮಾಜ ಸೇವಾ ಸಂಘಟನೆಯಲ್ಲೊಂದಾದ ಬೆಹರೈನ್ ಕುಲಾಲ್ಸ್’ನ 2018-19ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್ ಕುಲಾಲ್ ಮಾಣಿಲ ಆಯ್ಕೆಯಾಗಿದ್ದಾರೆ. ಸಮಾಜ ಸೇವಾ ಕ್ಷೇತ್ರದ ಯುವ ಸಾಧಕ ಗಣೇಶ್ ಅವರು ಮೂಲತಃ ಬಂಟ್ವಾಳದ ಮಾಣಿಲ ಗ್ರಾಮದವರಾಗಿದ್ದಾರೆ. ಎಂಬಿಎ ಪದವೀಧರರಾದ ಇವರು ಬೆಹರೈನ್ ನ ಪ್ರತಿಷ್ಠಿತ ಕಂಪೆನಿಯಲ್ಲಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರು ಆಗಿದ್ದಾರೆ.
ಇತ್ತೀಚೆಗೆ ನಡೆದ ಕಮಿಟಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಉಪಾಧ್ಯಕ್ಷರಾಗಿ ಬಾಲಕೃಷ್ಣ ಪುತ್ತಿಗೆ ಆಯ್ಕೆಯಾದರೆ, ಸಲಹಾ ಸಮಿತಿಯ ಸದಸ್ಯರಾಗಿ ಗುರುಪ್ರಸಾದ್ ಎಕ್ಕಾರ್, ನಾಗರಾಜ್ ಬಂಗೇರ, ನಾರಾಯಣ್ ಬಂಗೇರ, ನಾರಾಯಣ್ ಎನ್.ಕೆ ಆಯ್ಕೆಯಾದರು.
ಇತರ ಪ್ರಮುಖ ಪದಾಧಿಕಾರಿಗಳಾಗಿ ರಾಧಾಕೃಷ್ಣ ಮಾರ್ತಾಜೆ, ಕೇಶವ್ ಕುಲಾಲ್, ಜಯಕಾಂತ್ ಪೊಯ್ಯಲೆ, ನಿರಂಜನ್, ನವೀನ ಕುಲಾಲ್, ಪ್ರವೀಣ್ ಇನ್ನಾ, ಧನಂಜಯ್ ಕಿನ್ನಿಗೋಳಿ, ಧನುಷ್ ಬಂಗೇರ, ವಿಶಾಲಾಕ್ಷಿ ಕಿಶೋರ್, ರಂಜನ್, ಸಂದೀಪ್ ಆಯ್ಕೆಗೊಂಡರು.
ಇದೇ ಸಂದರ್ಭ ತುಳುನಾಡಿನ ಹೊಸ ವರ್ಷದ ಆಚರಣೆಯಾದ ಬಿಸು ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯರಾದ ಶ್ರೀಮತಿ ರತ್ನಾ ಬಸಪ್ಪ ಭಾಗವಹಿಸಿ ಕಿರಿಯರಿಗೆ ಹುರುಪು ತುಂಬಿದರು.