ಬೆಳ್ಮಣ್ : ಮುಂಡ್ಕೂರು ಜೇಸಿಐ ಭಾರ್ಗವ ಇದರ ಅಧ್ಯಕ್ಷೆ ಅರುಣಾ ಕುಲಾಲ್ ಅವರ ಸಾರಥ್ಯದಲ್ಲಿ, ಕುಲಾಲ ಸಂಘ ನಾನಿಲ್ತಾರಿನ ಮಹಿಳಾ ಘಟಕದ ಅಧ್ಯಕ್ಷೆ ಆಶಾ ವರದರಾಜ್ ಅವರ ಸಹಕಾರದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ನಾನಿಲ್ತಾರ್ ಕುಲಾಲ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ಆಚರಿಸಲಾಯಿತು. ಜೇಸಿಐ ನ ಗಣ್ಯರು ಅತಿಥಿಯಾಗಿ ಭಾಗವಹಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರು:
1. ಶೈಕ್ಷಣಿಕ ಕ್ಷೇತ್ರ : ಕೌಸ್ತುಭ, ಮುಂಡ್ಕೂರು
2. ಸಮಾಜ ಸೇವೆ ಮತ್ತು ಸಂಘಟನೆ: ರೇಶ್ಮಾ ಉದಯ್ ಶೆಟ್ಟಿ , ಇನ್ನಾ
3. ಶಶಿಕಲಾ, ಸಂಕಲಕರಿಯ
4. ಕೃಷಿ ಕ್ಷೇತ್ರ: ವಸಂತಿ ಪೂಜಾರಿ, ಶೆಟ್ಟಿಬೆಟ್ಟು
5. ಸ್ವ ಉದ್ಯೋಗ ಕ್ಷೇತ್ರ: ರಾಧಿಕಾ ಕೃಷ್ಣ ನಾಯಕ್, ಕಡಂದಲೆ
6. ಸವಿತಾ ದಿನೇಶ್, ಮುಂಡ್ಕೂರು
7. ಕ್ರೀಡಾ ಕ್ಷೇತ್ರ: ಮಮತಾ ಶರತ್ ಶೆಟ್ಟಿ , ಸಂಕಲಕರಿಯ
8. ಮಹಿಳಾ ಸಂಘಟನೆ: ಬಿ ವಾರಿಜ, ನಾನಿಲ್ತಾರ್
ಇದೇ ಸಂದರ್ಭ “ಹೆಣ್ಣು ಮಗುವಿನ ರಕ್ಷಣೆ ಅತ್ಯಗತ್ಯ” ಎಂಬ ವಿಷಯದ ಕುರಿತು ಅರುಣಾ ಕುಲಾಲ್ ಬರೆದಿರುವ ಬರೆದಿರುವ ಕರಪತ್ರವನ್ನು ಮುಖ್ಯ ಅತಿಥಿಯಾಗಿದ್ದ ವಿದ್ಯಾಶ್ರೀ ರಘುನಾಥ್ ನಾಯಕ್ ಬಿಡುಗಡೆಗೊಳಿಸಿದರು.
ಅದೇ ದಿನ ಅರುಣಾ ಕುಲಾಲ್ ಅವರ ನೇತೃತ್ವದಲ್ಲಿ ಕಡಂದಲೆಯ ಪಲ್ಕೆಯಲ್ಲಿರುವ ಗಣೇಶದರ್ಶನ ಹಾಲ್ ನಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಮಾರು 350ಕ್ಕೂ ಅಧಿಕ ಮಹಿಳೆಯರ ತ್ರೈಮಾಸಿಕ ಒಕ್ಕೂಟ ಸಭೆಯಲ್ಲಿ ಸಮಾಜ ಸೇವೆ ಮತ್ತು ಮಹಿಳಾ ಸಂಘಟನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಾಲ್ವರು ಮಹಿಳೆಯರನ್ನು ಸನ್ಮಾನಿಸಲಾಯಿತು.
