ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ) ಇದರ ನೇತೃತ್ವದಲ್ಲಿ ನಡೆದಿದ್ದ `ವಾಯ್ಸ್ ಆಫ್ ಉಡುಪಿ-ಸೀಸನ್ 5- ಸಂಗೀತ ರಿಯಾಲಿಟಿ ಷೋದ 15 ವರ್ಷ ಒಳಗಿನ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಕ್ರಮವಾಗಿ ವಿಜಯಲಕ್ಷ್ಮೀ ಕುಲಾಲ್ ಹಾಗೂ ತನುಷ್ ರಾಜ್ ವಿಜೇತರಾಗಿ ಹೊರಹೊಮ್ಮಿದ್ದಾರೆ.
6 ವಾರಗಳ ಕಾಲ ನಡೆದಿದ್ದ ಕಾರ್ಯಕ್ರಮದಲ್ಲಿ 12 ಮಂದಿ ಸ್ಪರ್ಧಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಇತ್ತೀಚೆಗೆ ಉಡುಪಿಯ ಪುರಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರ ಆಯ್ಕೆ ನಡೆಯಿತು.
ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ) ಇವರು ಸತತ 5 ನೇ ಬಾರಿಗೆ ಕಾರ್ಯಕ್ರಮದಲ್ಲಿ ವನ್ನು ಆಯೋಜಿಸಿದ್ದಾರೆ. ಒಕ್ಕೂಟದ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಮಾತನಾಡಿ ಈ ವರ್ಷ ಕರಾವಳಿ ಸಂಗೀತ ಕಲಾವಿದರ ಒಕ್ಕೂಟವು ದಶಮಾನೋತ್ಸವವನ್ನು ಆಚರಿಸುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಒಂದು ವೇದಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಯಶವಂತ್ ಆಚಾರ್ಯ, ಶಶಿಕಿರಣ್ ಚೆನ್ನಗಿರಿ, ಅಜಯ್ ವಾರಿಯರ್ ತೀರ್ಪುಗಾರರಾಗಿ ಸಹಕರಿಸಿದ್ದರು. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಯಶವಂತ್ ಆಚಾರ್ಯ 15 ವರ್ಷ ಮೇಲ್ಪಟ್ಟವರ ತೀರ್ಪುಗಾರಿಕೆ ನಡೆಸುವುದು ತುಂಬಾ ಕಷ್ಟದ ವಿಷಯವಾಗಿತ್ತು ಎಂದರು. ಇದೇ ವೇಳೆ ಸಂಗೀತ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ್ದಕ್ಕಾಗಿ ಪ್ರೇಮ್ ಕುಮಾರ್ ಹಾಗೂ ಬಿ. ಕಾರಂತ್ ಇವರನ್ನು ಸನ್ಮಾನಿಸಲಾಯಿತು.
15 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ನಿಶಾ ಫೆರ್ನಾಂಡಿಸ್ ಹಾಗೂ 15 ವರ್ಷ ಒಳಗಿನ ವಿಭಾಗದಲ್ಲಿ ಸ್ವಸ್ತಿಕ್ ದ್ವಿತೀಯ ಸ್ಥಾನಿಗಳಾಗಿ ಹೊರಹೊಮ್ಮಿದ್ದರು.
ಜಯಕರ್ ಶೆಟ್ಟಿ ಇಂದ್ರಾಳಿ, ಮುರಳಿಧರ್ ಕಾಮತ್, ಭಾಸ್ಕರ್ ಬಸ್ರೂರ್, ಮಲ್ಲಿಕಾ ಶೆಟ್ಟಿ, ನಮ್ಮ ಮೊಬೈಲ್ ಮಾಲಕರಾದ ಹರೀಶ್ ಹಾಗೂ ಗಣೇಶ್, ವಿಜಯ್ ಗೋಪಾಲ್ ಬಂಗೇರ, ಶರತ್ ಉಚ್ಚಿಲ ಹಾಗೂ ಇತರರು ಉಪಸ್ಥಿತರಿದ್ದರು. ಸಂಚಿಕೆಯು ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗಿದೆ.
ಕುಂದಾಪುರ ಮೆಟ್ಟಿನಹೊಳೆಯವರಾದ ವಿಜಯಲಕ್ಷ್ಮೀ ಕುಲಾಲ್ ಅವರು ಉಳ್ತೂರಿನಲ್ಲಿ ನಡೆದ `ವಾಯ್ಸ್ ಆಫ್ ಉಳ್ತೂರು’ ಸ್ಫರ್ಧೆಯ್ಲಲೂ ಕೂಡ ಪ್ರಥಮ ಸ್ಥಾನ ಗಳಿಸಿದ್ದಾರೆ. ಪ್ರಸ್ತುತ ರೋಟರಿ ಕ್ಲಬ್ ಬ್ರಹ್ಮಾವರ ಇವರ ನೆತ್ರತ್ವದಲ್ಲಿ ನಡೆಯುತ್ತಿರುವ `ವಾಯ್ಸ್ ಆಫ್ ಕರಾವಳಿ ಸೀಸನ್ 2′ ಇದರ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಕೃಪೆ : ದೈಜಿವರ್ಲ್ಡ್ ಡಾಟ್ ಕಾಮ್