ಮಂಗಳೂರು(ಜ.೨೦, ಕುಲಾಲ್ ವರ್ಲ್ಡ್ ನ್ಯೂಸ್): ಇತ್ತೀಚೆಗೆ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ (ಎಸ್ಡಿಎಸ್ಐಕೆ) ಸಂಸ್ಥೆಯು ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಿದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿದ ಕುಂದಾಪುರ ಕಾವಡಿ ಹೆವರಾಲಿನ ಮೇಘನಾ ಎಸ್ ಕುಲಾಲ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಈಕೆ ಸಾಯ್ಬರಕಟ್ಟೆ ಮೈಂಡ್ ಲೀಡ್ ಕರಾಟೆ ಸ್ಕೂಲ್ ನ ಅಶೋಕ್ ಕುಲಾಲ್ ನಡೂರು ಅವರ ಶಿಷ್ಯೆಯಾಗಿದ್ದು, ಕಾವಡಿ ಹೆವರಾಲಿನ ಶೇಖರ್ ಕುಲಾಲ್-ಪ್ರೇಮಾ ದಂಪತಿಯ ಸುಪುತ್ರಿ.
ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ : ಮೇಘನಾ.ಎಸ್. ಕುಲಾಲ್ ಗೆ ಕಂಚಿನ ಪದಕ
sports
1 Min Read


