ಮಂಗಳೂರು(ಜ.೧೬, ಕುಲಾಲ್ ವರ್ಲ್ಡ್ ನ್ಯೂಸ್): ಕೇರಳದಲ್ಲಿ ನಡೆದ ಜೆಎಸ್ ಕೆಎ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದ ಧನ್ಯತಾ ಕುಲಾಲ್ ಕುಲಶೇಖರ ಇವರಿಗೆ ಕುಲಾಲ ಯಾನೆ ಕುಂಬಾರರ ಸಂಘ(ರಿ) ನೀರುಮಾರ್ಗ ಇದರ ವತಿಯಿಂದ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಧನ್ಯತಾ ಅವರು ಬೆಂದೂರು ಸಂತ ಆಗ್ನೆಸ್ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಕೇರಳದಲ್ಲಿ ನಡೆದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ೧೦ರಿಂದ ೧೨ ವರ್ಷದೊಳಗಿನ ೪೫ ಕೆಜಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಬ್ಲಾಕ್ ಬೆಲ್ಟ್ ಟೀಮ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.




