ಕಾರ್ಕಳ(ಜ.೦೩, ಕುಲಾಲ್ ವರ್ಲ್ಡ್ ನ್ಯೂಸ್): ಹೈದರಾಬಾದ್ ನಲ್ಲಿ ಇತ್ತೀಚೆಗೆ ಜರುಗಿದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ನಿಟ್ಟೆ ಡಾ.ಎನ್.ಎಸ್.ಎ.ಎಂ ಸ್ಕೂಲ್ ನ ವಿದ್ಯಾರ್ಥಿನಿಯರಾದ ದೀಪ್ತಿ ಹಾಗೂ ತೃಪ್ತಿ ಅವರು ಭಾಗವಹಿಸಿ ಒಟ್ಟು ಮೂರು ಪದಕ ಗೆದ್ದಿದ್ದಾರೆ. ದೀಪ್ತಿ ಅವರು ಒಂಭತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಕರಾಟೆಯಲ್ಲಿ ಕಂಚಿನ ಪದಕ ಗೆದ್ದರೆ, ಆರನೇ ತರಗತಿ ವಿದ್ಯಾರ್ಥಿನಿಯಾಗಿರುವ ತೃಪ್ತಿ ಅವರು ಎರಡು ಚಿನ್ನದ ಪದಕ ಗಳಿಸಿದ್ದಾರೆ. ಇವರು ನಿಟ್ಟೆ ಹರೀಶ್ ಟಿ. ಕುಲಾಲ್ ಮತ್ತು ಜ್ಯೋತಿ ದಂಪತಿಯ ಸುಪುತ್ರಿಯರು.
ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪದಕ ಗೆದ್ದ ಸಹೋದರಿಯರು
sports
1 Min Read




