ಕಾರ್ಕಳ: ಮಿಯ್ಯಾರು ಗ್ರಾಮದಲ್ಲಿ ನಬಾರ್ಡ್ ಯೋಜನೆಯಲ್ಲಿ ಸುಮಾರು 17 ಲಕ್ಷ ರೂ. ವೆಚ್ಚದ ಅನುದಾನದಲ್ಲಿ ನಡೆಯುತ್ತಿರುವ ಸೂರಾಲು-ಇರ್ವತ್ತೂರು ಸಂಪರ್ಕ ರಸ್ತೆಯ ಕಾಮಾಗಾರಿಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ವೀಕ್ಷಣೆ ನಡೆಸಿದರು.
ಕಾಮಗಾರಿಗೆ ತಮ್ಮ ಪಟ್ಟಾ ಜಾಗವನ್ನು ಬಿಟ್ಟುಕೊಟ್ಟ ಸೂರಾಲು ಕೋಡಿ ಮನೆ ಶೀನ ಮೂಲ್ಯ, ರಾಜು ಮೂಲ್ಯ, ಸುನಂದ ಮೂಲ್ಯ ಮತ್ತು ಸೂರಪ್ಪ ಬಂಗೇರ ಇವರಿಗೆ ಶಾಲು ಹೊದಿಸಿ ಸನ್ಮಾನಿಸಿದ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ನಾವು ಗಳಿಸಿದ ಹಣ ಮತ್ತಿತರ ಆಸ್ತಿಗಿಂತ ಜೀವನದಲ್ಲಿ ಮಾಡಿರುವ ತ್ಯಾಗವೇ ಶೇಷ್ಠವೆಂದ ಅವರು ಸಾರ್ವಜನಿಕ ರಸ್ತೆಗೆ ತಮ್ಮ ಸ್ವಂತ ಸ್ಥಳವನ್ನು ಬಿಟ್ಟುಕೊಟ್ಟು ಸಹಕರಿಸಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಳೆದ ಎರಡು ತಿಂಗಳುಗಳ ಹಿಂದೆ ಸೂರಾಲು ಕೃಷಿಕರ ಘಟಕದ ಮೂಲಕ ಮನವಿ ಸಲ್ಲಿಸಿರುವ ಕರಿಯಕಲ್ಲು-ಸೂರಾಲು ಸಂಪರ್ಕ ರಸ್ತೆ ಮತ್ತು ಜೋಡುಕಟ್ಟೆ-ಕಜೆ ತಮ್ಮಗುಡ್ಡೆ ಎಸ್.ಟಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಆದಷ್ಟು ಶೀಘ್ರದಲ್ಲಿ ಅನುದಾನ ಬಿಡುಗಡೆಗೊಳಿಸುವುದಾಗಿ ಇದೇ ಸಂದರ್ಭದಲ್ಲಿ ಭವರಸೆ ನೀಡಿದರು.
ಮಾಜಿ ಶಾಸಕ ಎಚ್.ಗೋಪಾಲಭಂಡಾರಿ ಮಾತನಾಡಿ, ರಾಜ್ಯ ಸರಕಾರ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯುವಜನತೆಗೆ ಶ್ರಮಿಸಬೇಕು ಎಂದರು. ವೇದಿಕೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾಣ್, ಮಿಯ್ಯಾರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಜೆರಾಲ್ಡ್ ಡಿ.ಸಿಲ್ವ, ಉದ್ಯಮಿ ಜಯಪ್ರಕಾಶ್ ದೇವಾಡಿಗ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದಸುಧಾಕರ ಎಂ.ಶೆಟ್ಟಿ, ಸೂರು, ಕಾರ್ಕಳ ಪುರಸಭಾ ಸದಸ್ಯ ಅನೀನ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ವಸಂತ ಕುಲಾಲ್ ನಿರೂಪಿಸಿದರು. ಉಮೇಶ್ ಎಸ್.ಪೂಜಾರಿ ವಂದನಾರ್ಪಣೆಗೈದರು.