ಶಿರ್ವ(ಡಿ.೨೫, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸಮುದಾಯದ ಯುವಕ ಯುವತಿಯರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆಗೈಯುತಿದ್ದಾರೆ. ಹಲವು ಪ್ರತಿಭೆಗಳನ್ನು ತಮ್ಮೊಳಗೆ ಬಚ್ಚಿಟ್ಟುಕೊಂಡಿದ್ದಾರೆ. ಇಂತಹ ಪ್ರತಿಭೆಗಳ ಸಾಲಿಗೆ ಸೇರುವ ಹಿರಿಯ ಮಹಿಳಾ ಕ್ರೀಡಾಪಟುವೊಬ್ಬರು ಸದ್ದಿಲ್ಲದೆ ಸಾಧನೆಯ ಮೆಟ್ಟಿಲನ್ನು ಏರಿ ನಿಂತಿದ್ದಾರೆ. ಹಲವು ಕ್ರೀಡಾ ಸಾಧನೆಗೈದಿದ್ದಾರೆ. ಅವರ ಸಾಧನೆ ಇಂದಿನ ಯುವ ಸಮೂಹಕ್ಕೆ ಬೆರಗು ಮೂಡುವಂತಿದೆ.
ಹೌದು. ಇವರೇ ಗೀತಾ ಕುಲಾಲ್ ಶಿರ್ವ. ಶಿರ್ವ ಎಂ ಆರ್ ಎಸ್ ಕಾಲೇಜಿನ ಕಚೇರಿಯ ಸಹಾಯಕಿಯಾಗಿ ಹತ್ತು ಹಲವು ಕ್ರೀಡಾ ಸ್ಪರ್ಧೆಯಲ್ಲಿ ಶ್ರೇಷ್ಟ ಸಾಧನೆಗೈದು ಸಾಧಕಿಯಾಗಿದ್ದಾರೆ. ತಾಯಿ ಸಂಕ್ರಿ ಮೂಲ್ಯ- ತಂದೆ ಅಪ್ಪು ಮೂಲ್ಯ ಪುತ್ರಿಯಾಗಿ ಬಡತನದ ನೋವನ್ನು ಬಾಲ್ಯದಿಂದಲೇ ಅನುಭವಿಸಿ ಬೆಳೆದವರು. ಇನ್ನಂಜೆ ಸುಂದರ ಮೂಲ್ಯರೊಂದಿಗೆ ಮದುವೆಯಾಗಿ ಮೂರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳದೊಂದಿಗೆ ಜೀವನ. ಸಂಸಾರದ ಜಂಜಾಟದ ಮಧ್ಯೆಯೂ ಕ್ರೀಡೆಯಲ್ಲಿ ಸಾಧನೆಗೈದ ಅಪೂರ್ವ ಪ್ರತಿಭೆಯಾಗಿದ್ದಾರೆ. ಗೀತಾ ಕುಲಾಲ್ ಅವರ ಕ್ರೀಡಾ ಸಾಧನೆಯ ಬಗ್ಗೆ ಕಿರುಚಿತ್ರಣ ಇಲ್ಲಿದೆ.
2012ನೇ ಇಸವಿಯಲ್ಲಿ ಉಡುಪಿಯಲ್ಲಿ ನಡೆದ ಮಾಸ್ಟರ್ ಅತ್ಲೆಟಿಕ್ಸ್ ಕ್ರೀಡಾಕೂಟ 45+ ವಿಭಾಗದಲ್ಲಿ..
1)ಜಾವೆಲಿನ್-ಪ್ರಥಮ
2)400 ಮೀಟರ್ ಓಟ- ದ್ವೀತಿಯ
.
ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ Inter Dist ಮಾಸ್ಟರ್ ಅತ್ಲೆಟಿಕ್ ಕ್ರೀಡಾ ಕೂಟದಲ್ಲಿ…
1)ಹ್ಯಾಮರ್ ತ್ರೋ-ದ್ವಿತೀಯ
2)ಜಾವಲಿನ್ ತ್ರೋ-ತೃತೀಯ
2013ನೇ ಇಸವಿಯಲ್ಲಿ ಮಂಗಳ ಸ್ಟೇಡಿಯಂ ಮಂಗಳೂರು ಇಲ್ಲಿ ನಡೆದ ಅವಿಭಜಿತ ದ.ಕ ಜಿಲ್ಲಾ ಮಟ್ಟದ ಅತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ..
1)ಹ್ಯಾಮರ್ ತ್ರೊ-ಪ್ರಥಮ
2)ಶಾಟ್ ಪುಟ್-ದ್ವಿತೀಯ
3) ಜಾವೆಲಿನ್ ತ್ರೋ-ದ್ವಿತೀಯ
ಮಂಡ್ಯದಲ್ಲಿ ಜರಗಿದ ರಾಜ್ಯಮಟ್ಟದ ಮಾಸ್ಟರ್ ಅತ್ಲೆಟಿಕ್ ಕ್ರೀಡಾಂಗಣದಲ್ಲಿ..
1)ಜಾವೆಲಿನ್ ತ್ರೋ-ಪ್ರಥಮ
2)ಡಿಸ್ಕಸ್ ತ್ರೋ- ದ್ವಿತೀಯ
3)ಹೈಜಂಪ್-ತೃತೀಯ
2015ನೇ ಇಸವಿಯಲ್ಲಿ ತುಮಕೂರಿನಲ್ಲಿ ಪಡೆದ ರಾಜ್ಯಮಟ್ಟದ ಅತ್ಲೆಟಿಕ್ ಕ್ರೀಡೂಕೂಟದಲ್ಲಿ
1) ಜಾವೆಲಿನ್ ತ್ರೋ-ಪ್ರಥಮ
2)ಹ್ಯಾಮರ್ ತ್ರೊ- ದ್ವಿತೀಯ
3)ಡಿಸ್ಕಸ್ ತ್ರೋ-ತೃತೀಯ
ಉಡುಪಿಯಲ್ಲಿ ಜರುಗಿದ 35ನೇ ಮಾಸ್ಟರ್ ಅತ್ಲೇಟಿಕ್ ಕ್ರೀಡಾಕೂಟದಲ್ಲಿ..
1)ಹ್ಯಾಮರ್ ತ್ರೋ-ದ್ವಿತೀಯ
2)ಜಾವೆಲಿನ್ ತ್ರೋ- ದ್ವೀತಿಯ
ತಮಿಳುನಾಡು ಕೊಯಮತ್ತೂರಿನಲ್ಲಿ ರಾಷ್ಟ್ರಮಟ್ಟದ ಅತ್ಲೆಟಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ತ್ರೊ ಹಾಗೂ ಡಿಸ್ಕಸ್ ತ್ರೋ ವಿಭಾಗದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲು ಅಯ್ಕೆಯಾದ ಪ್ರತಿಭೆ.
ಸಾಧಿಸುವ ಛಲ ಇದ್ದರೆ, ಸಾಧನೆಯ ಹಂಬಲ ಇದ್ದರೆ ಉನ್ನತವಾದುದನ್ನು ಸಾಧಿಸಬಹುದು ಅನ್ನುವುದಕ್ಕೆ ಗೀತಕ್ಕ ಒಂದು ಉದಾಹರಣೆ. ಮದುವೆಯಾಗಿ ಮಕ್ಕಳು ಸಂಸಾರದ ಜೊತೆ ಜೊತೆಯಲ್ಲಿ ಕ್ರೀಡೆಯಲ್ಲಿ ಈ ಸಾಧನೆಗೈದ ಇವರಿಗೆ ಶುಭಾಶಯಗಳು..
ಬರಹ :ಉದಯ ಕುಲಾಲ್ ಕಳತ್ತೂರು
ಮಾಹಿತಿ: ರಶ್ಮಿ ಮೂಲ್ಯ ಬೆಳ್ಮಣ್


