ಯುಎಇ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕುಲಾಲ ಫ್ಯಾಮಿಲಿ ಯುಎಇ ಇದರ ಹೆಮ್ಮೆಯ ಸದಸ್ಯೆ ವಿದುಷಿ ರೂಪಾ ಕಿರಣ್ ಅವರ ನೇತೃತ್ವದ ‘ನೃತ್ಯ ಶಕ್ತಿ – ಸೌಲ್ ಆಫ್ ಡ್ಯಾನ್ಸ್’ ಸಂಸ್ಥೆಯ ವತಿಯಿಂದ ‘ನೃತ್ಯ ವೈಭವ – 2026’ ಎಂಬ ಭವ್ಯ ಸಾಂಸ್ಕೃತಿಕ ಮತ್ತು ನೃತ್ಯ ಕಾರ್ಯಕ್ರಮವನ್ನು ಅಕ್ಟೋಬರ್ 4 ರ ಭಾನುವಾರದಂದು ಆಯೋಜಿಸಲಾಗಿದೆ.
ಅಜ್ಮಾನಿನ ನಾರ್ತ್ ಗೇಟ್ ಬ್ರಿಟಿಷ್ ಸ್ಕೂಲ್ನಲ್ಲಿ ಸಂಜೆ 4:00 ಗಂಟೆಯಿಂದ ಆರಂಭವಾಗಲಿರುವ ಈ ಕಾರ್ಯಕ್ರಮವು ಭಾರತೀಯ ನೃತ್ಯ ಪರಂಪರೆ, ಲಯ ಹಾಗೂ ಭಾವಗಳ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಲಿದೆ. ಸಂಸ್ಥೆಯ ವಿದ್ಯಾರ್ಥಿಗಳ ಕಲಾ ಸಾಮರ್ಥ್ಯವನ್ನು ಅನಾವರಣಗೊಳಿಸುವ ಜೊತೆಗೆ ನೃತ್ಯ ರಂಗದ ಭವಿಷ್ಯದ ತಲೆಮಾರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಶಿಸ್ತು, ಸಮರ್ಪಣಾ ಭಾವ ಹಾಗೂ ಸಾಂಪ್ರದಾಯಿಕ ಮೌಲ್ಯಗಳನ್ನು ಸಾರುವ ಈ ವೇದಿಕೆಯಲ್ಲಿ ನೃತ್ಯ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಕೋರಿದ್ದಾರೆ.

ಚಿತ್ರ – ಮಾಹಿತಿ: ಅಕ್ಷಯ್ ಕುಲಾಲ್, ಯುಎಇ
