ಶಿರಿಯಾರ: ಕುಲಾಲ ಸಮಾಜ ಸುಧಾರಕ ಸಂಘ(ರಿ)ಕೋಟ ಹೋಬಳಿ ಇದರ ತೃತೀಯ ವರ್ಷದ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಮೆಕ್ಕೆಕಟ್ಟುವಿನ ಗಾಂಧಿ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.
ಕನರ್ಾಟಕ ರಾಜ್ಯಕುಂಬಾರ ಸಂಘ ಉಡುಪಿ ಜಿಲ್ಲಾಘಟಕದ ಅಧ್ಯಕ್ಷರಾದ ರಾಮ ಕುಲಾಲ್ ಪಕ್ಕಾಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಉಡುಪಿ ಜಿಲ್ಲೆಯಕುಂಬಾರ ಸಮುದಾಯ ಸಾಕಷ್ಟು ಬುದ್ದಿವಂತರಾಗಿದ್ದು ಉಳಿದ ಪ್ರಬಲ ಸಮುದಾಯಗಳಿಗೆ ಸ್ಪಧರ್ೆಯೊಡ್ಡುವ ಹಂತಕ್ಕೆ ಇಂದು ಬೆಳೆದಿದ್ದಾರೆ. ಆದಾಗ್ಯೂ ತೀರಾ ಗ್ರಾಮೀಣ ಭಾಗದಲ್ಲಿ ಕುಲಾಲ ಸಮುದಾಯದವರು ಇನ್ನೂ ಹಿಂದೆ ಉಳಿದಿದ್ದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಕುಲಾಲ ಸಂಘಗಳು ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಸಮಾಜ ಸುಧಾರಕ ಸಂಘ ಶಿರಿಯಾರ ಮೆಕ್ಕೆಕಟ್ಟು ಇದರ ಅಧ್ಯಕ್ಷರಾದ ಅಶೋಕ್ಕ ುಲಾಲ್ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀನಿವಾಸ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಮುಖ್ಯ ಮೆಡಿಕಲ್ ಆಫೀಸರ್ ಮತ್ತು ವೈದ್ಯರಾದ ಡಾ. ಎಂ ಅಣ್ಣಯ್ಯ ಕುಲಾಲ್ ಅವರು ಮಾತನಾಡಿ ನಾಗರಿಕತೆಯ ಹುಟ್ಟಿನೊಂದಿಗೆ ಹುಟ್ಟಿಕೊಂಡಕ ುಂಬಾರ ಸಮುದಾಯ ಬೇರೆ ಬೇರೆ ಹೆಸರಿನಿಂದ ಭಾರತಾದ್ಯಂತ ಬೇರು ಬಿಟ್ಟಿರುವ ಸಮುದಾಯ. ಪ್ರಾಮಾಣಿಕತೆ, ಶಿಸ್ತು, ಸಂಯಮದ ಪ್ರತಿರೂಪವಾಗಿರುವಕ ುಂಬಾರ ಸಮುದಾಯ ಕರಾವಳಿ ಭಾಗದಲ್ಲಿ ಬಲಿಷ್ಟವಾದ ಸಂಘಟನೆಯನ್ನುಕ ಟ್ಟಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರು. ಕುಲಾಲ ಸಮುದಾಯದವರಾದ ಮುಂದಿನ ಗುರಿ ರಾಜಕೀಯವಾಗಿದ್ದು ಕುಂಬಾರ ಸಮುದಾಯದಯುವ ಮನಸ್ಸುಗಳು ಸಾಕಷ್ಟು ರಾಜಕೀಯದ ಬಗೆಗೆ ಆಸಕ್ತಿಯನ್ನು ಹೊಂದಿದ್ದು ಮುಂಬರುವ ದಿನಗಳಲ್ಲಿ ಕುಲಾಲ ಸಮುದಾಯ ಬಲಿಷ್ಟ ಸಮುದಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಪ್ಪನಾಡು ಸೌಹಾರ್ದ ಸಹಕಾರಿ ನಿಗಮದ ನಿದರ್ೇಶಕರಾದ ಶ್ರೀಮತಿ ಕಸ್ತೂರಿ ಪಂಜ, ಕರಾವಳಿ ಕುಲಾಲ ಕುಂಬಾರಯುವ ವೇದಿಕೆ ಮಂಗಳೂರಿನ ವಲಯಾಧ್ಯಕ್ಷರಾಗಿರುವ ಗಂಗಾಧರ ಬಂಜನ್, ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿರುವರ ಾಜೀವ ಕುಲಾಲ್ ಬ್ರಹ್ಮಾವರ, ಬೈಂದೂರು ವಲಯದ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಶಿರಿಯಾರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ, ವಿದ್ಯುತ್ ಪರಿವೀಕ್ಷಣ ಇಲಾಖೆ ಉಡುಪಿಯ ಸಹಾಯಕ ವಿದ್ಯುತ್ ಪರಿವೀಕ್ಷಕರಾದ ವಿಘ್ನೇಶ ಕುಲಾಲ್ ಕಕ್ಕುಂಜೆ, ಆರೂರುಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಗಣೇಶ್ ಕುಲಾಲ್, ಕುಲಾಲ ಸಮಾಜ ಸುಧಾರಕ ಸಂಘ ಕೋಟ ಹೋಬಳಿಯ ನಿಯೋಜಿತ ಅಧ್ಯಕ್ಷರಾದ ರಾಘವೇಂದ್ರಕುಲಾಲ್ ಶಿರಿಯಾರ ಇನ್ನಿತರಗಣ್ಯರು ಉಪಸ್ಥಿರಿದ್ದರು.
ಇದೇ ಸಂಧರ್ಭದಲ್ಲಿ ಈ ಹಿಂದೆ ನೆಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪದರ್ಿಸಿದ ಕೋಟ ಹೋಬಳಿ ವ್ಯಾಪ್ತಿಯ ಎಲ್ಲಕುಂಬಾರ ಸಮಾಜದ ಅಭ್ಯಥರ್ಿಗಳನ್ನು ಗುರುತಿಸಿ ಗೌರವಿಸಲಾಯಿತು. ಅಲ್ಲದೆ ಮಂದಾತರ್ೀ ಮೇಳದ ಪ್ರಧಾನ ಭಾಗವತರಾದ ನಾಗೇಶ್ಕ ುಲಾಲ್ ನಾಗರಕೋಡಿಗೆ, ಸ್ರೀ ಕಲಾವಿದ ಬಸವ ಕುಲಾಲ್ ಗಾವಳಿ ಮತ್ತು ಅಖಿಲ ಭಾರತ ವಿದ್ಯಾಥರ್ಿ ಪರಿಷತ್ ಉಡುಪಿ ಜಿಲ್ಲಾ ಸರ್ವಕಾಲೇಜು ಘಟಕದ ಅಧ್ಯಕ್ಷರಾದ ರಂಜಿತ್ಕುಲಾಲ್ ಶಿರಿಯಾರ ಇವರನ್ನು ಗೌರವಿಸಲಾಯ್ತು.
ಇದೇ ಸಂಧರ್ಭದಲ್ಲಿ ಕೋಟ ಹೋಬಳಿ ವ್ಯಾಪ್ತಿಯ ಎಸ್ಎಸೆಎಲ್ಸಿ ಮೇಲ್ಪಟ್ಟ ಪ್ರತಿಭಾನ್ವಿತ 60 ವಿದ್ಯಾಥರ್ಿಗಳಿಗೆ ಗೌರವ ಧನ ನೀಡಲಾಯ್ತು.
ಕುಲಾಲ ಸಮಾಜ ಸುಧಾರಕ ಸಂಘ ಕೋಟ ಹೋಬಳಿಯ ಪ್ರಧಾನ ಕಾರ್ಯದಶರ್ಿ ಸತೀಶ್ ಕುಲಾಲ ನಡೂರು ವಾಷರ್ಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸಂತೋಷ್ ಕುಲಾಲ್ ಶಿರಿಯಾರ ಲೆಕ್ಕ ಪತ್ರ ಮಂಡನೆಗೈದರು.
ರವೀಂದ್ರಕುಲಾಲ್ ಶಿರಿಯಾರ ಸ್ವಾಗತಿಸಿದರು. ಮಂಜುನಾಥ್ ಕುಲಾಲ್ ಹಿಲಿಯಾಣ ಕಾರ್ಯಕ್ರಮ ನಿರೂಪಣೆಗೈದು ಧನ್ಯವಾದ ಸಮಪರ್ಿಸಿದರು.