ದೆಹಲಿ : 2016ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಅತ್ಯಂತ ಕಿರಿಯ ಐಎಎಸ್ ಎಂಬ ಹಿರಿಮೆಗೆ ದೆಹಲಿ ಶ್ರೀನಗರದ ಸ್ವಾತಿ ನೊಖ್ವಾಲ್ ಪಾತ್ರರಾಗಿದ್ದಾರೆ. ಯಾವುದೇ ಕೋಚಿಂಗ್ ಪಡೆಯದೇ ತನ್ನ ಪ್ರಥಮ ಯತ್ನದಲ್ಲೇ ಈ ಸಾಧನೆಗೈದಿರುವ ಸ್ವಾತಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಮಾನ್ಯ ಕೆಟಗರಿಯಲ್ಲಿ 765ನೇ ಸ್ಥಾನ ಗಳಿಸಿದ್ದಾರೆ.
ಇಪ್ಪತ್ತೆರಡರ ವಯಸ್ಸಿನ ಸ್ವಾತಿ ಅವರು ಪ್ರಜಾಪತಿ ಸಮುದಾಯದ ಇಂದ್ರೇಶ್ ನೊಖ್ವಾಲ್- ಶಕುಂತಳಾ ವರ್ಮಾ ದಂಪತಿಯ ಸುಪುತ್ರಿಯಾಗಿದ್ದಾಳೆ. ತಂದೆ ಇಂದ್ರೇಶ್ ಅವರು ರೈಲ್ವೇ ಉದ್ಯೋಗಿಯಾಗಿದ್ದು, ತಾಯಿ ಶಕುಂತಳಾ ಅವರು ಸರಕಾರಿ ಶಿಕ್ಷಕಿಯಾಗಿದ್ದು, ತನ್ನ ಸಾಧನೆಗೆ ಇವರಿಬ್ಬರೇ ಪ್ರೇರಕರಾಗಿದ್ದಾರೆ. ಇದರ ಶ್ರೇಯಸ್ಸು ತನ್ನ ಪೋಷಕರಿಗೆ ಸಲ್ಲುತ್ತದೆ ಎಂದು ಸ್ವಾತಿ ಹೇಳಿದ್ದಾರೆ.
ದೆಹಲಿ ಯುನಿವರ್ಸಿಟಿಯ ಕಳೆದ ವರ್ಷದ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ ಸ್ವಾತಿ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಎಂಬ ಪ್ರಮಾಣಪತ್ರ ಪಡೆದಿದ್ದು, ಈಕೆ ಯುಪಿಎಸ್ಸಿ ಪರೀಕ್ಷೆಗಾಗಿ ದಿನಕ್ಕೆ ೧೦ರಿಂದ ೧೨ಗಂಟೆ ನಿರಂತರ ಅಭ್ಯಾಸ ನಡೆಸಿದ್ದಾರೆ. ಈಕೆ ಸಾಮಾನ್ಯ ಕೆಟಗರಿ ಬದಲಿಗೆ ಓಬಿಸಿಯಲ್ಲಿ ಪರೀಕ್ಷೆ ಬರೆದಿದ್ದರೆ 765ನೇ ಸ್ಥಾನಕ್ಕಿಂತಲೂ ಕಡಿಮೆ ಸ್ಥಾನ ಲಭಿಸುತ್ತಿತ್ತು ಎನ್ನಲಾಗುತ್ತಿದೆ.
ಸೇಕ್ರೆಡ್ ಹಾರ್ಟ್ ಸ್ಕೂಲ್ ವಿದ್ಯಾರ್ಥಿನಿಯಾದ ಸ್ವಾತಿ ಪಿಯುಸಿಯಲ್ಲಿ 90% ಅಂಕ ಗಳಿಸಿ ಪಾಸಾಗಿದ್ದರು. ಆಕೆಯ ಸಹೋದರ ಶುಭಮ್ ಅವರು ಈ ವರ್ಷ ವಿಜ್ಞಾನ ವಿಷಯದಲ್ಲಿ 95% ಅಂಕ ಪಡೆದಿದ್ದಾರೆ. ಯುಪಿಎಸ್ಸಿ ಪರೀಕ್ಷೆ ಬರೆದ ದೇಶದ 30 ಲಕ್ಷ ವಿದ್ಯಾರ್ಥಿಗಳ ಪೈಕಿ ಸ್ವಾತಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ.
ಕುಂಬಾರ ಜನಾಂಗದ ಸ್ವಾತಿಗೆ ಅತ್ಯಂತ ಕಿರಿಯ ಐಎಎಸ್ ಎಂಬ ಹಿರಿಮೆ!
Kulal news
1 Min Read