ಕರಾವಳಿ ಎಂಬುವುದು ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಹೆಮ್ಮೆಯ ಜಿಲ್ಲೆ. ಇಲ್ಲಿ ಅದೇಷ್ಟೋ ಎಲೆ ಮರೆಯ ಪ್ರತಿಭೆಗಳು ತೆರೆಮರೆಯಲ್ಲಿ ಸಾಧನೆಯ ಶಿಖರವೇರಿರುವುದು ಯಾರಿಗೂ ತಿಳಿದಿರುವುದಿಲ್ಲ. ಇಂತಹ ಸಾಧನೆಯ ಹೊಸ್ತಿಲನ್ನು ದಾಟಿದವರಲ್ಲಿ ನಮ್ಮ ಕರಾವಳಿಯ ಹೆಮ್ಮೆಯ ಮನೆ ಮಗಳು ಕುಮಾರಿ ನಿಶ್ಮಿತಾ ಕುಲಾಲ್ ಸಹ ಒಬ್ಬರು.

ಮಂಗಳೂರಿನ ಅಶೋಕ ನಗರ ಬಳಿಯ ಹೊಗೈಬೈಲು ನಿವಾಸಿಗಳಾದ ಗೋಪಾಲ್ ಹಾಗೂ ಸುನೀತಾ ದಂಪತಿಯ ಸುಪುತ್ರಿಯಾಗಿರುವ ನಿಶ್ಮಿತಾ ಇವರು ವಾಲಿಬಾಲ್, ಪವರ್ ಲಿಫ್ಟಿಂಗ್ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಂಗಳೂರು ಬಂಟ್ಸ್ ಹಾಸ್ಟೆಲ್ ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿರುವ ಇವರು ಅಲೋಶಿಯಸ್ ಕಾಲೇಜ್ ನಲ್ಲಿ ಪಿ.ಯು.ಸಿ ಮುಗಿಸಿ ಸದ್ಯ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉನ್ನತ ಪದವಿ ಪೂರೈಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದ ಅಪಾರ ಆಸಕ್ತಿಯೊಂದಿಗೆ ಡ್ಯಾನ್ಸ್, ಹಾಡುವಿಕೆ, ಹಾಗೂ ಡ್ರಾಯಿಂಗ್ ಅಭ್ಯಾಸವನ್ನು ಸಹ ಮೈಗೂಡಿಸಿಕೊಂಡಿದ್ದಾರೆ.

ಲಕ್ಷ್ಮಣ್ ರೈ ಹಾಗೂ ನಿತೀಶ ರೋಡ್ರಿಗಸ್ ಇವರ ಮಾರ್ಗದರ್ಶನದಲ್ಲಿ ಪಳಗಿರುವ ಇವರು , ವಾಲಿಬಾಲ್ ಅಥ್ಲೆಟಿಕ್ ನಲ್ಲಿ ಚಾಂಪಿಯನ್ ಆಗಿದ್ದರೆ, ಕಾಲೇಜ್ ನಲ್ಲಿ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಎಂಬ ಪುರಸ್ಕಾರವನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ.
ವಾಲಿಬಾಲ್ ,ಎತ್ತರ ಜಿಗಿತ , ಪವರ್ ಲಿಫ್ಟಿಂಗ್ ಗಳಲ್ಲಿ ಹೆಸರು ಸಂಪಾದಿಸಿರುವ ನಿಶ್ಮಿತಾರವರ ಬದುಕು ಹಸನ್ಮುಖಿಯಾಗಿರಲಿ ಇನ್ನಷ್ಟು ಎತ್ತರದ ಸಾಧನೆಯ ಶಿಖರವೇರಲಿ ಎಂದು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಶುಭ ಹಾರೈಸುತ್ತದೆ.




