ಕುಲಾಲರು ಕುಲ ಕಸುಬು ಮರೆಯಬಾರದು : ಉಪನ್ಯಾಸಕಿ ಜ್ಯೋತಿ ಚೇಳಾಯಿರು
ಮುಡಿಪು : ಕುಲಾಲರು ಸ್ವಾವಲಂಬನೆಯ ಬದುಕಿನ ಜತೆಗೆ ತಮ್ಮ ಕುಲಕಸುಬು ಹಾಗು ಕೃಷಿಯನ್ನು ಎಂದಿಗೂ ಮರೆಯಬಾರದು ಎಂದು ಹಳೆಯಂಗಡಿ ಕಾಲೇಜಿನ ಉಪನ್ಯಾಸಕಿ ಜ್ಯೋತಿ ಚೇಳಾಯಿರು ಹೇಳಿದರು.
ಕುಲಾಲ ಸಂಘ ಮುಡಿಪು ಇಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಹಿರಿಯ ಪತ್ರಕರ್ತ ಆನಂದ ಅಮ್ಮೆಂಬಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯ ಗಿರೀಶ್ ಕೆ ಎಚ್ , ಶ್ರೀ ದೇವಿ ದೇವಸ್ಥಾನದ ಶ್ರೀವಿವಾಸ ಪಡೀಲ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ತುಳು ಅಕಾಡೆಮಿ ಸದಸ್ಯರಾದ ಡಿ ಎಂ ಕುಲಾಲ್, ಪತ್ರಕರ್ತರಾದ ಶಶಿಧರ ಪೊಯ್ಯತ್ತಬೈಲ್ , ಓಎನ್ ಜಿಸಿ ಕರ್ಮಚಾರಿ ಸಂಘದ ಅಧ್ಯಕ್ಷ ಪ್ರವೀಣ್ ದೇಹದಾಡ್ಯ ಪಟು ಉದಯ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಗ್ರಾ ಪ೦ ಚುನಾವಣೆಯಲ್ಲಿ ವಿಜೇತರಾದ ಗೋಪಾಲ ಬಂಗೇರ, ಚಂದಪ್ಪ ಮೂಳೂರು, ಭಾಸ್ಕರ ಸಜೀಪನಡು, ಜನಾರ್ಧನ ಆನೆಗುಂಡಿ , ಮಾನಸ ಕೊಲ್ಲರಮಜಲು , ವಿಜಯ ಕುಮಾರ್ ವಿದ್ಯಾನಗರ, ಹರಿಣಾಕ್ಷಿ ಮಿತ್ತಮೂಲೆ, ರಾಜೀವಿ ಮುದುಂಗಾರು ಮುಂತಾದವರನ್ನು ಗೌರವಿಸಲಾಯಿತು. ಉಜಿರೆಯ ರುಡ್ ಸೆಟ್ ನ ಅಬ್ರಹಾಂ ಜೇಮ್ಸ್ ಸಂಪನ್ಮೂಲ ವ್ಯಕ್ತಿಯಾಗಿ ಸ್ವಾವಲಂಬನೆಯ ಬದುಕಿನ ಬಗ್ಗೆ ಮಾಹಿತಿ ನೀಡಿದರು.
ಕುಲಾಲ ಸಂಘದ ಅಧ್ಯಕ್ಷ ಶ್ರೀನಿವಾಸ ಮೂಲ್ಯ ಕೊಳಂಬೆ, ಸಮಾಜ ಸೇವಾ ಬ್ಯಾಂಕಿನ ವಿಶ್ವನಾಥ್ , ಸಂಘದ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ , ಕೋಶಾಧಿಕಾರಿ ಪುಂಡರೀಕಾಕ್ಷ , ಧನಲಕ್ಷ್ಮೀ , ಉಪಾಧ್ಯಕ್ಷರಾದ ವಿಟಲ ಕುಲಾಲ್ ಉಪಸ್ಥಿತರಿದ್ದರು
ಗಿರೀಶ್ ಅವರು ಸ್ವಾಗತಿಸಿ, ಶಶಿಕಲಾ ವಂದಿಸಿದರು ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.