ಕಾರ್ಕಳ (ನ.೦೫): ನಿಟ್ಟೆ ಡಾ. ಎನ್ ಎಸ್ ಎಎಂ ಶಾಲಾ ವಿದ್ಯಾರ್ಥಿಗಳಾದ ದೀಪ್ತಿ ಕುಲಾಲ್ ಹಾಗೂ ಆಕೆಯ ಸಹೋದರಿ ತೃಪ್ತಿ ಕುಲಾಲ್ ಹುಬ್ಬಳ್ಳಿಯ ವಾಸವಿ ಮಹಲ್ ನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದಿದ್ದಾರೆ.
೧೬ ವರ್ಷ ಒಳಗಿನ ಕಟಾ ವಿಭಾಗದಲ್ಲಿ ದೀಪ್ತಿ ಪದಕ ಗಳಿಸಿದರೆ, ತೃಪ್ತಿ ೧೪ ವರ್ಷದ ಒಳಗಿನ ಫೈಟಿಂಗ್ ವಿಭಾಗದಲ್ಲಿ ಈ ಪದಕ ಪಡೆದಿದ್ದಾಳೆ. ಇವರು ದೂಪದಕಟ್ಟೆ ಕೌಡೊಟ್ಟು ಹರೀಶ್ ಕುಲಾಲ್ ಹಾಗೂ ಜ್ಯೋತಿ ಕುಲಾಲ್ ದಂಪತಿಯ ಸುಪುತ್ರಿಯರು. ಕರಾಟೆ ಶಿಕ್ಷಕರಾದ ಸತೀಶ್ ಹಾಗೂ ರಂಜಿತ್ ಬಳಿ ಇವರು ಅಭ್ಯಾಸ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಕರಾಟೆ ಸ್ಪರ್ಧೆ : ಸಹೋದರಿಯರಿಗೆ ಕಂಚಿನ ಪದಕ
Students corner
1 Min Read


