ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ದೈಜಿ ವರ್ಲ್ಡ್ ಟಿವಿ ವಾಹಿನಿಯವರು ಆಯೋಜಿಸಿರುವ “ಅಭಿವ್ಯಕ್ತ ನನ್ನ ಧ್ವನಿ ನನ್ನ ಶಕ್ತಿ “6 ಸುತ್ತುಗಳ ಸರಣಿ ಭಾಷಣ ಸ್ಪರ್ಧೆಯಲ್ಲಿ ಕುಮಾರಿ ಮನಸ್ವೀ ಕುಲಾಲ್ ಕಾರ್ಕಳ ಪದವು ಇವರು ಸುಮಾರು 150 ಸ್ಪರ್ಧಾರ್ಥಿಗಳ ಪೈಕಿ “ಅತ್ಯುತ್ತಮ ನಿರೂಪಕಿ “ಪ್ರಶಸ್ತಿ ಯ ಜತೆ ₹5000 ನಗದು ಬಹುಮಾನ ಪಡೆದಿರುತ್ತಾರೆ. ಇವರು ನಿಟ್ಟೆ ಗ್ರಾಮದ ಕಲಂಬಾಡಿ ಪದವು ಇಲ್ಲಿಯ ಶ್ರೀ. ಸಂತೋಷ್ ಕುಲಾಲ್ ಹಾಗೂ ಮಂಜುಳಾ ಸ್. ಕುಲಾಲ್ ದಂಪತಿಗಳ ಸುಪುತ್ರಿ. ಇವರು ಶ್ರೀಮದ್ ಭುವನೇಂದ್ರ ಹೈಸ್ಕೂಲ್ ಇಲ್ಲಿಯ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

